Home Crime ಕಳವು: ಶಂಕಿತನ ಮಾಹಿತಿಗೆ ಮನವಿ…!!

ಕಳವು: ಶಂಕಿತನ ಮಾಹಿತಿಗೆ ಮನವಿ…!!

ಉಪ್ಪಿನಂಗಡಿ : ಬೆಳ್ತಂಗಡಿ ಹಾಗೂ ಉಪ್ಪಿನಂಗಡಿ ಪರಿಸರಗಳಲ್ಲಿ ಇತ್ತೀಚಿಗಿನ ದಿನಗಳಲ್ಲಿ ನಡೆದಿರುವ ಸರಣಿ ಕಳ್ಳತನ ಪ್ರಕರಣಗಳಲ್ಲಿ ಕಣ್ಣೂರು ತಳಿಪರಂಬು ನಿವಾಸಿ ತಂಗಚ್ಚ ಯಾನೆ ಮ್ಯಾಥ್ಯ ಯಾನೆ ಬಶೀರ್ ಎಂಬಾತ ಭಾಗಿಯಾಗಿರುವ ಬಗ್ಗೆ ಸಂಶಯವಿದ್ದು, ಈತನ ಮಾಹಿತಿ ಲಭ್ಯವಿದ್ದಲ್ಲಿ ಪೊಲೀಸರಿಗೆ ನೀಡಬೇಕೆಂದು ಸಾರ್ವಜನಿಕರಲ್ಲಿ ಇಲಾಖೆಯು ವಿನಂತಿಸಿದೆ.

ಈತ ಪದ್ಮಂಜದಲ್ಲಿ ನಡೆದ ಮನೆ ಕಳ್ಳತನ, ಉಪ್ಪಿನಂಗಡಿ ಹಾಗೂ ಬೆಳ್ತಂಗಡಿಗಳಲ್ಲಿ ನಡೆದಿರುವ ಸರಣಿ ಕಳ್ಳತನಗಳಲ್ಲಿ ಭಾಗಿಯಾಗಿರುವ ಶಂಕೆಯಿದೆ.

ಮಾಹಿತಿ ತಿಳಿದವರು ಹತ್ತಿರದ ಠಾಣೆಗೆ ತಿಳಿಸುವಂತೆ ಇಲಾಖೆ ಮನವಿ ಮಾಡಿದೆ.