ಕುಂದಾಪುರ : ಲಯನ್ಸ್ ಜಿಲ್ಲೆ 317C ಇದರ ವಾರ್ಷಿಕ ಜಿಲ್ಲಾ ಕ್ರೀಡಾಕೂಟದ ಚಾಂಪಿಯನ್ ಟ್ರೋಫಿ ಮತ್ತು ರನ್ನರ್ ಟ್ರೋಫಿ ಹಾಗೂ ಕ್ರೀಡಾಕೂಟದ ಸುತ್ತೋಲೆ ಬಿಡುಗಡೆ ಸಮಾರಂಭವು ಕುಂದಾಪುರದ ಸಹನ ಕನ್ವೆನ್ಷನ್ ಸಭಾಭವನದಲ್ಲಿ ನಡೆಯಿತು.
ಜಿಲ್ಲಾ ಗವರ್ನರ್ ಲಯನ್ ಸಪ್ನಾ ಸುರೇಶ್ ಕ್ರೀಡಾಕೂಟದ ಟ್ರೋಫಿ ಅನಾವರಣಗೊಳಿಸಿದರು. ಮಾತ್ರವಲ್ಲದೆ ಕ್ರೀಡಾಕೂಟದ ಸುತ್ತೋಲೆ, ನಿಯಮಗಳು ಮತ್ತು ಕ್ರೀಡಾಕೂಟದ ಸಂಬಂಧಿತ ಪರಿಕರಣಗಳನ್ನು ಅನಾವರಣಗೊಳಿಸಿದರು. ಬಳಿಕ ಮಾತನಾಡಿದ ಅವರು, ಈ ಕ್ರೀಡಾಕೂಟವು ಜಿಲ್ಲೆಯ ಇತಿಹಾಸದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ನಡೆಯಲಿದ್ದು, ಎಲ್ಲಾ ಕ್ಲಬ್ ಗಳು ಸಕ್ರಿಯವಾಗಿ ಭಾಗವಹಿಸಿದರೆ ನಮ್ಮೆಲ್ಲರ ಒಗ್ಗಟ್ಟು ಪ್ರದರ್ಶನ ವಾದಂತಾಗುತ್ತದೆ. ಈ ಕ್ರೀಡಾಕೂಟದ ಮೂಲಕ ಹೊಸ ಸದಸ್ಯರನ್ನು ನೋಂದಾವಣೆ ಮಾಡಲು ಅವಕಾಶವಿದ್ದು, ಎಲ್ಲಾ ಕ್ಲಬ್ ಗಳು ಅದನ್ನು ಉಪಯೋಗಿಸಿಕೊಳ್ಳಿ ಎಂದರು.
ನಿಕಟಪೂರ್ವ ಜಿಲ್ಲಾ ಗವರ್ನರ್ ಲಯನ್ ಮೊಹಮದ್ ಹನೀಫ್, ಪ್ರಥಮ ಉಪಗವರ್ನರ್ ಲಯನ್ ರಾಜೀವ್ ಕೋಟ್ಯಾನ್, ದ್ವಿತೀಯ ಉಪ ಗವರ್ನರ್ ಲಯನ್ ಹರಿಪ್ರಸಾದ್ ರೈ, ಮಾಜಿ ಗವರ್ನರ್ ಲಯನ್ ಪ್ರಕಾಶ್ ಸೋನ್ಸ್, ಲಯನ್ಸ್ ಜಿಲ್ಲಾ ಆಡಳಿತ ನಿರ್ವಹಣಾಧಿಕಾರಿ ಲಯನ್ ಅರುಣ್ ಹೆಗ್ಡೆ, ಲಯನ್ ಇಂಜಿನಿಯರ್ ರಮಾನಂದ್ ಮತ್ತು ಲಯನ್ ರಂಜನ್ ಕಲ್ಕೂರ ಶುಭ ಹಾರೈಸಿದರು. ಜಿಲ್ಲಾ ಲಯನ್ಸ್ ಕೋಶಾಧಿಕಾರಿ ಲಯನ್ ಶಶಿಧರ್ ಶೆಟ್ಟಿ, ಜಿಲ್ಲಾ ಲಿಯೋ ಅಧ್ಯಕ್ಷ ಚಿರಾಗ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ಕ್ರೀಡಾಕೂಟದ ಪ್ರಧಾನ ಸಂಯೋಜಕ ಲಯನ್ ರೋವನ್ ಡಿಕೋಸ್ಟ ಸ್ವಾಗತಿಸಿದರೆ, ಲಯನ್ ಬಾಲಕೃಷ್ಣ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಲಯನ್ ಶಿವಾನಂದ ಸನು ಧನ್ಯವಾದ ಸಮರ್ಪಿಸಿದರೆ, ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.
ಅಕ್ಟೋಬರ್ 5 ರಂದು ಕುಂದಾಪುರದ ಸಹನ ಕನ್ವೆನ್ಷನ್ ಸೆಂಟರ್ ನಲ್ಲಿ ಜಿಲ್ಲಾ ಲಯನ್ ಸದಸ್ಯರಿಗೆ ವಿವಿಧ ಒಳಾಂಗಣ ಕ್ರೀಡೆಗಳು, ನವಂಬರ್ 8 ಮತ್ತು 9 ರಂದು ಜಿಲ್ಲಾ ಸದಸ್ಯರಿಗೆ ಕ್ರಿಕೆಟ್ ಲೀಗ್ ಮತ್ತು ವಾರ್ಷಿಕ ಲಯನ್ಸ್ ಕ್ರೀಡಾಕೂಟ ಡಿಸೆಂಬರ್ 7ರಂದು ಗಾಂಧಿ ಮೈದಾನ ಕುಂದಾಪುರದಲ್ಲಿ ನಡೆಯಲಿದೆ.




