Home Crime ಕಟಪಾಡಿ : ಅಕ್ರಮ ಮದ್ಯ ಮಾರಾಟ : ಪ್ರಕರಣ ದಾಖಲು….!!

ಕಟಪಾಡಿ : ಅಕ್ರಮ ಮದ್ಯ ಮಾರಾಟ : ಪ್ರಕರಣ ದಾಖಲು….!!

ಕಾಪು: ಉಡುಪಿ ಜಿಲ್ಲೆಯ ಕಾಪು ಸಮೀಪದ ಕಟಪಾಡಿ ಪೇಟೆಯ ಬಾರೊಂದರ ಪಕ್ಕದ ಶೆಡ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪ್ರಕರಣದ ಸಾರಾಂಶ : ದಿನಾಂಕ: 01/07/2025ರಂದು ಬೆಳಿಗ್ಗೆ 10:50 ಗಂಟೆಗೆ ಕಾಪು ಪೊಲೀಸ್‌ ಠಾಣೆಯ ಪೊಲೀಸ್‌ ಉಪನಿರೀಕ್ಷಕರಾದ ತೇಜಸ್ವಿ ಟಿ ಐ ರವರು ದಿನಾಂಕ: 01/07/2025ರಂದು ಠಾಣಾ ವ್ಯಾಪ್ತಿಯ ಪಾಂಗಾಳ, ಕಟಪಾಡಿ ಕಡೆಗಳಲ್ಲಿ ರೌಂಡ್ಸ್‌ ಕರ್ತವ್ಯದಲ್ಲಿರುವಾಗೆ ಸಮಯ 10:30 ಗಂಟೆಗೆ ಬಾತ್ಮೀದಾರರಿಂದ ಕಾಪು ತಾಲೂಕು ಮೂಡಬೆಟ್ಟು ಗ್ರಾಮದ ಕಟಪಾಡಿ ಪೇಟೆಯ ವೈನ್ ಗೇಟ್‌ ಎಂಬ ಹೆಸರಿನ ಬಾರ್‌ ಪಕ್ಕದಲ್ಲಿರುವ ತೆರೆದ ಶೆಡ್‌ ನಲ್ಲಿ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಕಟಪಾಡಿ ಹೊರಠಾಣೆ ಎ.ಎಸ್.ಐ ದಯಾನಂದ ರವರನ್ನು ಬರಮಾಡಿಕೊಂಡು 10:35 ಗಂಟೆಗೆ ಘಟನಾ ಸ್ಥಳವನ್ನು ತಲುಪಿ ಸ್ಥಳದಲ್ಲಿ ವರದಿ ತಯಾರಿಸಿ ಪ್ರಕರಣ ದಾಖಲಿಸುವಂತೆ ಸಿಬ್ಬಂದಿಯವರೊಂದಿಗೆ ಠಾಣೆಗೆ ಕಳುಹಿಸಿದ ವರದಿ ಮೇರೆಗೆ ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 88/2025 ಕಲಂ: ಕಲಂ: 32, 34 K.E Act ನಂತೆ ಪ್ರಕರಣ ದಾಖಲಾಗಿರುತ್ತದೆ.