Home Karavali Karnataka ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಸ್ಥಾನದ ಕೆರೆ ಸ್ವಚ್ಛತೆ..!!

ಕಿರಿಮಂಜೇಶ್ವರದ ಅಗಸ್ತ್ಯೇಶ್ವರ ದೇವಸ್ಥಾನದ ಕೆರೆ ಸ್ವಚ್ಛತೆ..!!

ಬೈಂದೂರು:  ಶ್ರೀ ಕ್ಷೇತ್ರ ಧರ್ಮಸ್ಥಳ ಕಿರಿಮಂಜೇಶ್ವರ ವಲಯದ ಕಂಬದ ಕೋಣೆ ಶೌರ್ಯ ವಿಪತ್ತು ಘಟಕದ ಸದಸ್ಯರು ದಿನಾಂಕ 27 04 2025 ಆದಿತ್ಯವಾರ ಕಿರಿಮಂಜೇಶ್ವರ ಅಗಸ್ತ್ಯೇಶ್ವರ ದೇವಸ್ಥಾನದ ಪವಿತ್ರ ತೀರ್ಥಕೆರೆಯ ಸ್ವಚ್ಛತೆ ಕಾರ್ಯಕ್ರಮವನ್ನು ಬೆಳಿಗ್ಗೆ ಗಂಟೆ 9:00 ರಿಂದ ಸಂಜೆ 5:00 ವರೆಗೆ ಯಾವುದೇ ಒಂದು ಫಲಾಪೇಕ್ಷೆ ಇಲ್ಲದೆ ನಿಸ್ವಾರ್ಥ ಸೇವೆಯನ್ನ ಮಾಡಿದರು.

ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಶೆಟ್ಟಿ ಅವರು ಮಾತನಾಡಿ ಕ್ಷೇತ್ರ ಧರ್ಮಸ್ಥಳ ಕಿರಿಮಂಜೇಶ್ವರ ವಲಯದ ಕಂಬದ ಕೋಣೆ ಶೌರ್ಯ ವಿಪತ್ತು ಘಟಕದ ಸದಸ್ಯರು ಒಂದು ಉತ್ತಮ ಕಾರ್ಯವನ್ನು ನಿರ್ವಹಿಸಿದರು ಹಾಗೆ
ಕೆರೆ ನೀರು ಕೃಷಿ ಜಮೀನಿನ ತೇವಾಂಶ ಉಳಿಸುತ್ತಾ ಬಂದಿದೆ. ಇಂತಹ ಅಂಶಗಳು ಇಂದಿನ ಯುವ ಪೀಳಿಗೆಗೆ ಅರಿವಾಗಬೇಕು. ಒಮ್ಮೆ ಸ್ವಚ್ಛಗೊಳಿಸಿದ ಕೆರೆಯಲ್ಲಿಜನರು ಕಸ ಚೆಲ್ಲದಂತೆ ಜಾಗೃತಿ ವಹಿಸಿ ಪರಿಪಾಲಿಸುತ್ತಾರೆ. ಪರಿಸರ ಪ್ರೀತಿಸುವ ಜತೆಗೆ ಕೆರೆ ಗೌರವಿಸುವ ಕಾರ‍್ಯ ತುರ್ತಾಗಿ ನಡೆಯಬೇಕಾಗಿದೆ ಎಂದರು.

ಈ ಸಂದರ್ಭದಲ್ಲಿ ಮಾಜಿ ವಲಯಾಧ್ಯಕ್ಷ ರಾದ ದಿನೇಶ್ ಅಚಾರ್, ರತ್ನಾಕರ ಕೊಡೇರಿ ಆಡಳಿತ ಮಂಡಳಿ ಸದಸ್ಯರು ಕ್ಷೇತ್ರ ಧರ್ಮಸ್ಥಳ ಕಿರಿಮಂಜೇಶ್ವರ ವಲಯದ ಕಂಬದ ಕೋಣೆ ಶೌರ್ಯ ವಿಪತ್ತು ಘಟಕದ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.