ಉಡುಪಿ: ಉಡುಪಿ- ಚಿಕ್ಕಮಗಳೂರು ಬಿಜೆಪಿ ಸಂಸದರಾಗಿರುವ ಕೋಟ ಶ್ರೀನಿವಾಸ ಪೂಜಾರಿಯವರು ತಮ್ಮ ಸೊಗಸಾದ ಮಾತುಗಾರಿಕೆಯಿಂದ ಜನರನ್ನು ಇಲ್ಲಿಯ ತನಕ ಮರಳು ಮಾಡಿದ್ದು ಬಿಟ್ಟರೆ ಯಾವುದೇ ರೀತಿಯ ಜನಪರ ಕೆಲಸ ಮಾಡಿದ ಉದಾಹರಣೆಗಳಿಲ್ಲ. ಅವರು ಕೇವಲ ಭಾಷಣಕ್ಕೆ ಸೀಮಿತ ಹೊರತು ಅಭಿವೃದ್ಧಿ ಕೆಲಸ ಶೂನ್ಯ ಎಂಬುದು ಪರ್ಕಳ ರಾಷ್ಟ್ರೀಯ ಹೆದ್ದಾರಿ ಹದಗೆಟ್ಟ ವಿಚಾರದಲ್ಲಿ ಸತ್ಯವಾಗಿದೆ ಎಂದು ನವೀನ್ ಸಾಲ್ಯಾನ್ ಹೇಳಿದ್ದಾರೆ.
ಕೋಟ ಶ್ರೀನಿವಾಸ ಪೂಜಾರಿಯವರು ಸಚಿವರಾಗಿದ್ದ ವೇಳೆ ಕರಾವಳಿ ಜಿಲ್ಲೆಗಳಿಗೆ ಕುಚ್ಚಲಕ್ಕಿ ಪಡಿತರದಲ್ಲಿ ನೀಡುವ ಭರವಸೆ ನೀಡಿದ್ದರು. ಪರಿಶಿಷ್ಟ ಪಂಗಡದ ಜನರಿಗೆ ಮನೆ ನಿರ್ಮಾಣಕ್ಕೆ ರೂ 5ಲಕ್ಷದಂತೆ ಅನುದಾನ ಒದಗಿಸುವುದಾಗಿ ಹೇಳಿದ್ದರು ಆದರೆ ಇಲ್ಲಿಯ ವರೆಗೆ ಅವರು ಅದನ್ನು ಜಾರಿ ಮಾಡಿಸುವಲ್ಲಿ ಸೋತಿದ್ದಾರೆ. ಕೇವಲ ಬಾಯಿಚಪಲಕ್ಕೆ ಭಾಷಣಗಳ ಮೂಲಕ ಜನರನ್ನು ಮರಳು ಮಾಡಿದ್ದು ಬಿಟ್ಟರೆ ಅವರ ಅವಧಿಯಲ್ಲಿ ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ದಿ ಕೆಲಸಗಳು ನಡೆದಿಲ್ಲ. ಇಂದ್ರಾಳಿ ಬ್ರಿಡ್ಜ್ ಅಂತು ಸಂಸದರ ಪ್ರವಾಸಿ ತಾಣವಾಗಿ ಮಾರ್ಪಟ್ಟಂತೆ ಕಾಣುತ್ತಿದೆ ಹೊರತು ಕಾಮಗಾರಿ ಪೂರ್ಣ ಗೊಳ್ಳುವ ಯಾವುದೇ ಲಕ್ಷಣ ಕಾಣುತ್ತಿಲ್ಲ.ಕೇಂದ್ರ ಸರಕಾರ ಗಣರಾಜ್ಯೋತ್ಸವ ಪರೇಡ್ ನಲ್ಲಿ ಬಿಲ್ಲವರ ಆರಾಧ್ಯ ದೈವ ಎನಿಸಿಕೊಂಡಿರುವ ಬ್ರಹ್ಮಶ್ರೀ ನಾರಾಯಣ ಗುರುಗಳ ಟ್ಯಾಬ್ಲೋ ನಿಷೇಧ ಮಾಡಿದಾಗಲೂ ಕೂಡ ಅದೇ ಬಿಲ್ಲವ ಸಮುದಾಯದ ನಾಯಕ ಎನಿಸಿಕೊಂಡ ಕೋಟರ ಬಾಯಿಗೆ ಬೀಗ ಹಾಕಿತ್ತು.
ಈಗ ಪರ್ಕಳ ರಸ್ತೆ ತೀರ್ವ ಹದಗೆಟ್ಟಿದ್ದು ಸದ್ಯ ವಾಹನ ಸವಾರರು ಹೈರಾಣಾಗಿ ಹೋಗಿದ್ದು,ಮಣಿಪಾಲ್ ಆಸ್ಪತ್ರೆಗೆ ಇದೇ ಮಾರ್ಗವಾಗಿ ಬರುವುದರಿಂದ ರೋಗಿಗಳು ಹಾಗೂ ಸಾರ್ವಜನಿಕರು ದಿನ ಹಿಡಿಶಾಪ ಹಾಕುವಂತ ಪರಿಸ್ಥಿತಿ ಉಂಟಾಗಿದೆ.ಗರ್ಬಿಣಿ ಸ್ತ್ರೀಯರು ಕೂಡ ಈ ರಸ್ತೆಯಲ್ಲಿ ಮಣಿಪಾಲ ಉಡುಪಿ ಕಡೆ ಆಸ್ಪತ್ರೆಗೆ ಆರೋಗ್ಯ ತಪಾಸಣೆಗೆ ಹೋಗುವಾಗ ಸಂಸದರಾದ ಶ್ರೀನಿವಾಸ್ ಪೂಜಾರಿ ಅವರಿಗೆ ಇವರು ನಾಮಕಾವಸ್ಥೆಗೆ ಸಂಸದರಾಗಿದ್ದ ಎಂದು ದೂರುವಂತ ಸನ್ನಿವೇಶ ಎದುರಾಗಿದೆ.
ಆದರೆ ಈ ಬಾರಿ ಆರು ತಿಂಗಳಲ್ಲಿ ಹಿಂದಿ ಕಲಿತು ಬಾಷಣ ಮಾಡುತ್ತೇನೆ ಎಂದು ಹೇಳಿದ್ದಿರಿ ಆದ್ದರಿಂದ ಪರ್ಕಳ ರಸ್ತೆಯ ಅವ್ಯವಸ್ಥೆ ಹಾಗೂ ದುರಸ್ತಿ ವಿಚಾರದಲ್ಲಿ ತಾವು ಲೋಕಸಭೆಯ ಅಧಿವೇಶನದಲ್ಲಿ ಹಿಂದಿಯಲ್ಲಿ ಮಾನ್ಯ ಸಾರಿಗೆ ಸಚಿವರಿಗೆ ಮನವರಿಕೆ ಮಾಡಿ ಪರ್ಕಳ ರಸ್ತೆ ದುರಸ್ತಿ ಮಾಡುವ ನಿಟ್ಟಿನಲ್ಲಿ ಸಚಿವರ ಗಮನ ಸೆಳೆಯಿರಿ. ಅದನ್ನಾದರೂ ಮಾಡಿ ಶೀಗ್ರ ಪರ್ಕಳ ರಸ್ತೆಯನ್ನು ದುರಸ್ತಿ ಮಾಡಿ ಸುಗಮ ಸಂಚಾರಕ್ಕಾಗಿ ಅನುವು ಮಾಡಿಸಿ ಕೊಡಿ ಎಂದು ನವೀನ್ ಸಾಲ್ಯಾನ್ ಆಗ್ರಹಿಸಿದ್ದಾರೆ.