ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲೆಯ ನಿನ್ನೆ ಸುರಿದ ಧಾರಾಕಾರ ಮಳೆಯ ಪರಿಣಾಮ ಬಂಟ್ವಾಳ ತಾಲೂಕಿನ ಹಲವು ಭಾಗಗಳಲ್ಲಿ ಸಿಡಿಲು ಬಡಿದು ಅಪಾರ ನಷ್ಠ ಸಂಭವಿಸಿದ ಬಗ್ಗೆ ವರದಿಯಾಗಿದೆ.
ಅದರಂತೆ ಪುಣ್ಯ ಕ್ಷೇತ್ರಗಳಲ್ಲಿ ಒಂದಾದ ಶಿವನ ದೇವಸ್ಥಾನವಾಗಿರುವ ಮಹತೋಬಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೂ ಸಿಡಿಲು ಬಡಿದಿರುವುದು ಅಲ್ಲಿನ ಆಡಳಿತ ವರ್ಗಕ್ಕೂ ಭಕ್ತರಲ್ಲೂ ಆತಂಕ ಮೂಡಿಸಿದೆ.
ಹೌದು, ಬಂಟ್ವಾಳ ತಾಲೂಕಿನ ಮಹತೋಬಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೂ ಸಿಡಿಲು ಬಡಿದು ಹಾನಿಯಾಗಿರುವ ಘಟನೆ ನಿನ್ನೆ ಸಂಜೆ ಸುಮಾರು 5.30 ರ ವೇಳೆ ನಡೆದಿದೆ. ಬೆಟ್ಟದ ಮೇಲೆ ಇರುವ ಶಿವನ ದೇವಾಲಯದ ಗರ್ಭಗುಡಿಯ ಒಂದು ಭಾಗಕ್ಕೆ ಸಿಡಿಲು ಬಡಿದು ಹಾನಿಯಾಗಿದೆ.




