Home Crime ಪುತ್ತೂರು: ಯುವತಿಯರ ಮುಂದೆ ಅನುಚಿತ ವರ್ತನೆ ಆರೋಪ : ಯುವಕ ಸೆರೆ…!!

ಪುತ್ತೂರು: ಯುವತಿಯರ ಮುಂದೆ ಅನುಚಿತ ವರ್ತನೆ ಆರೋಪ : ಯುವಕ ಸೆರೆ…!!

ಪುತ್ತೂರು: ಕುಂಬ್ರ ಬಳಿ ಯುವತಿಯರ ಮುಂದೆ ಅನುಚಿತವಾಗಿ ವರ್ತಿಸಿದ ಆರೋಪ ಸಂಬಂಧ ಯುವಕನೋರ್ವನನ್ನು ಸಂಪ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಂಧಿತ ಆರೋಪಿ ವಿಟ್ಲ ಮೂಲದ ರಾಜೇಶ್ (32) ಎಂದು ತಿಳಿದು ಬಂದಿದೆ.

ಆತನ ವರ್ತನೆಯ ಕುರಿತು ಪರ್ಪುಂಜದ ಮಹಿಳೆಯರಿಬ್ಬರು ದೂರು ನೀಡಿದ್ದರು. ಈ ಕುರಿತು ಸಂಪ್ಯ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ.