Home Crime ಕಲಬುರಗಿ : ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ…!!

ಕಲಬುರಗಿ : ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ…!!

ಕಲಬುರಗಿ : ನಗರದ ಮಿಲ್ಲತ್ ನಗರ್ ಕಾಲೋನಿಯಲ್ಲಿ ಮಹಮ್ಮದ್ ಬಿಲಾಲ್ ಅಲಿಯಾಸ್ ಸುರೇಶ್ ರೆಡ್ಡಿ ಎನ್ನುವ ವ್ಯಕ್ತಿಯ ಭೀಕರ ಹತ್ಯೆ ಸಂಭವಿಸಿದೆ.

ಮಾಲಗತ್ತಿ ಕ್ರಾಸ್ ನಿವಾಸಿಯಾದ ಬಿಲಾಲ್, ಕಳೆದ ಹಲವು ವರ್ಷಗಳಿಂದ ಸಣ್ಣಪುಟ್ಟ ರಿಯಲ್ ಎಸ್ಟೇಟ್ ದಂಧೆ ಮಾಡ್ತಾ ಇದ್ದ. ಆದರೆ ಅದೇ ರಿಯಲ್ ಎಸ್ಟೇಟ್ ದಂಧೆ ಈಗ ಆತನ ಪ್ರಾಣ ತೆಗೆದಿದೆ. ಕಲಬುರಗಿ ನಗರದಲ್ಲಿ ಗೇಣು ಜಾಗಕ್ಕೂ ಬಂಗಾರದ ಬೆಲೆಯಿದೆ. ಹೀಗಾಗಿ ಕಂಡ ಜಾಗಕ್ಕೆ ಬೇಲಿ ಹಾಕೋರೆ ಜಾಸ್ತಿಯಾಗಿದ್ದಾರೆ. ರೀಯಲ್ ಏಸ್ಟೇಟ್ ವ್ಯವಹಾರಕ್ಕೂ ರಕ್ತದ ಕಲೆ ಅಂಟುತ್ತಿದೆ. ಕಳೆದ ಹಲವು ವರ್ಷಗಳಿಂದ ಬಸವೇಶ್ವರ ಕಾಲೋನಿಯಲ್ಲಿ ಪತ್ನಿಯೊಂದಿಗೆ ವಾಸ ಮಾಡ್ತಾ ಇದ್ದ ವೇಳೆ ಅದೇ ಮನೆಯಲ್ಲಿ ಮುಸ್ಲಿಮ್ ಮಹಿಳೆಯೊಂದಿಗೆ ಪ್ರೀತಿಯಲ್ಲಿ ಬಿದ್ದು ಆಕೆಯೊಂದಿಗೆ ವಿವಾಹ ಮಾಡಿಕೊಂಡು ಮುಸ್ಲೀಂ ಧರ್ಮಕ್ಕೆ ಮತಾಂತರ ಆಗಿದ್ದ ಸುರೇಶ್ ರೆಡ್ಡಿ ಅಲ್ಲಿಯಾಸ್ ಬಿಲಾಲ್ ರಿಯಲ್ ಎಸ್ಟೆಟ್ ವ್ಯವಹಾರ ಮಾಡ್ತಿದ್ದ ಎಂದು ತಿಳಿಯಲಾಗಿದೆ.

ಮೊನ್ನೆ ಸಹ ಸೈಟ್ ಮಾರಾಟ ವಿಚಾರವಾಗಿ ಪರಿಚಯದ ವ್ಯಕ್ತಿಗಳ ಜೊತೆ ಮನಸ್ತಾಪ ಆಗಿದೆ. ಅದೇ ಕಾರಣಕ್ಕೆ ಆತನನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಹತ್ಯೆ ಮಾಡಿದ್ದಾರೆ. ಹತ್ಯೆ ಮಾಡಿದ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುಕಬೇಕು ಎಂದು ಕುಟುಂಬಸ್ಥರು ಹಾಗೂ ಆತನ ಸ್ನೇಹಿತರು ಆಗ್ರಹಿಸಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದೆ ಒಬ್ಬ ಮಹಿಳೆಗೆ ಸೈಟ್ ಕೊಡಿಸೋ ವಿಚಾರದಲ್ಲಿ ಅನ್ಯಾಯ ಆಗಿದೆ ಮಾತಾಡೋಣ ಬಾ ಎಂದು ಸುರೇಶ್ ಅಲಿಯಾಸ ಬಿಲಾಲ್‌ನನ್ನ ಬಿಸ್ಲೇರಿ ಹುಸೈನ್ ಎಂಬಾತ ಕರೆದುಕೊಂಡು ಹೋಗಿದ್ದ. ಅದೇ ವಿಚಾರಕ್ಕೆ ಅಲ್ಲಿ ಗಲಾಟೆ ಆಗಿತ್ತು. ನಂತರ ಮಾರನೆ ದಿನ ಸಂಜೆ ಅದೇ ಸೈಟ್ ವಿಚಾರಕ್ಕೆ ಮಾತಾಡೋಣ ಬಾ ಅಂತ ಬಿಸ್ಲೇರಿ ಹುಸೈನ್ ಕರ್ಕೊಂಡು ಹೋಗಿದ್ದ. ಅಲ್ಲಿ ಮೊದಲೇ ಪ್ಲಾನ್ ಮಾಡಿ, ಹುಸೈನ್ ಟೊಮಾಟೊ ಸಮೀರ್, ತಬ್ಬು, ಸೊಹೆಲ್ ನಾಲ್ಕು ಜನ ಸೇರಿ ಹತ್ಯೆ ಮಾಡಿದ್ದಾರೆ ಎಂದು ಆತನ ಕುಟುಂಬಸ್ಥರು ಆರೋಪಿಸುತ್ತಿದ್ದಾರೆ.

ಹತ್ಯೆ ನಡೆದ 28ಗಂಟೆಯಲ್ಲಿ ಪ್ರಕರಣದ ಪ್ರಮುಖ ಆರೋಪಿಯಾದ ಟಮೊಟಾ ಸಮೀರ ನನ್ನು ಪೋಲಿಸರು ಬಂಧಿಸಿದ್ದಾರೆ. ಇನ್ನು ಘಟನೆಯಲ್ಲಿ ಭಾಗವಹಿಸಿದ್ದ ಮೂವರು ಆರೋಪಿಗಳು ತೆಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಕಲಬುರ್ಗಿ ಪೊಲೀಸರು ಬಲೆ ಬಿರಿಸಿದ್ದಾರೆ

ಹೆಂಡತಿ ಮಕ್ಕಳು ಅಂತ ತನ್ನ ಪಾಡಿಗೆ ತಾನು ವ್ಯವಹಾರ ಮಾಡ್ತಾ ಇದ್ದ ಮಹ್ಮದ್ ಬಿಲಾಲ್, ವಿವಾದಿತ ಸೈಟ್ ಗೆ ಕೈ ಹಾಕಿ ಬರ್ಬರವಾಗಿ ಹತ್ಯೆ ಆಗಿ ಹೋಗಿದ್ದಾನೆ. ಇತ್ತ ಹಣದ ಆಶೆಗೆ ಸ್ನೇಹಿತ ನನ್ನೆ ಹತ್ಯೆಗೈದ ಆರೋಪಿ ಸಮೀರ್ ಕಂಬಿ ಎಣಿಸುತ್ತಿದ್ದು, ಉಳಿದ ಆರೋಪಿಗಳ ಹೆಡೆಮುರಿ ಕಟ್ಟಲು ಪೋಲಿಸರು ಕಾರ್ಯಚರಣೆ ಮುಂದುವರೆಸಿದ್ದಾರೆ.