Home Crime ಮಂಗಳೂರು : ಖಾಸಗಿ ಬಸ್‌ ಗಳ ಮೇಲೆ ಕಲ್ಲು ತೂರಾಟ : ಖಾಸಗಿ ಬಸ್ ಸಂಚಾರ...

ಮಂಗಳೂರು : ಖಾಸಗಿ ಬಸ್‌ ಗಳ ಮೇಲೆ ಕಲ್ಲು ತೂರಾಟ : ಖಾಸಗಿ ಬಸ್ ಸಂಚಾರ ಸ್ಥಗಿತ…!!

ಮಂಗಳೂರು: ಹಿಂದೂ ಸಂಘಟನೆ ಕಾರ್ಯಕರ್ತ ಸುಹಾಸ್‌ ಹತ್ಯೆ ಕೇಸ್‌ ಸಂಬಂಧಿಸಿ ಮೇ.2ರ ಶುಕ್ರವಾರ ನಗರದ ಯೂನಿವರ್ಸಿಟಿ ಕಾಲೇಜ್ ಬಳಿ ಖಾಸಗಿ ಬಸ್‌ ಗಳ ಮೇಲೆ ಕಲ್ಲು ತೂರಾಟ ನಡೆದಿದೆ.

ನಗರದ ಖಾಸಗಿ ಬಸ್ ಗಳ ಮೇಲೆ ದುಷ್ಕರ್ಮಿಗಳು ಕಲ್ಲು ತೂರಿದ್ದು, ಮೂರು ಬಸ್‌ ಗಳಿಗೆ ಹಾನಿಯಾಗಿದೆ ಎಂದು ತಿಳಿದು ಬಂದಿದೆ.

ಇಂದು ಮುಂಜಾನೆ ಚಲಿಸುತ್ತಿದ್ದ ಬಸ್ ಗೆ ದುಷ್ಕರ್ಮಿಗಳ ತಂಡ‌ ಕಲ್ಲು ತೂರಿದ್ದು, ಈ ಹಿನ್ನೆಲೆ ನಗರದಲ್ಲಿ ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದೆ.

ಮೇ 5 ವರೆಗೆ ನಿಷೇದಾಜ್ಞೆ : ಗುರುವಾರ ಮಂಗಳೂರಿನ ಬಜ್ಪೆ ಪರಿಸರದಲ್ಲಿ ನಡೆದ ಅಹಿತಕರ ಘಟನೆ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದಿನಾಂಕ ಮೇ 5 ವರೆಗೆ ನಿಷೇದಾಜ್ಞೆ ಜಾರಿ ಮಾಡಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.