Home Karavali Karnataka ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ 2025…!!

ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ 2025…!!

ಉಡುಪಿ :-ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ ಶಾಖೆ ಕರ್ನಾಟಕ ರಾಜ್ಯೋತ್ಸವ ಸಡಗರ ಸಾಹಿತಿ ದಿ.ಮೇಟಿ ಮುದಿಯಪ್ಪ ನೆನಪಿನ ಮಲಬಾರ್ ವಿಶ್ವ ಸಾಹಿತ್ಯ ಪುರಸ್ಕಾರ 2025 ಕಾರ್ಯಕ್ರಮ ನ. 22ರಂದು ಮಲಬಾರ್ ನಲ್ಲಿ ನಡೆಯಿತು.

ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಹಿರಿಯ ಸಾಹಿತಿ ಡಾ. ಮಾಧವಿ ಭಂಡಾರಿ, ಸಾಹಿತ್ಯವು ವಿವಿಧ ಮಜಲು ಗಳಿಂದ ಕೂಡಿದೆ ನಮ್ಮ ದೈನಂದಿನ ವಿವಿಧ ರೀತಿಯ ಮನೋಭಾವನೆಯನ್ನು ಅಕ್ಷರ ರೂಪಕ್ಕೆ ಕೊಂಡೊಯ್ತು ಅದನ್ನು ಮತ್ತೊಬ್ಬರಿಗೆ ಹಂಚುವ ಶ್ರೇಷ್ಠ ಕಾರ್ಯ ನಮ್ಮ ಸಾಹಿತಿಗಳಿಂದ ನಡೆಯುತ್ತಿದೆ.
ಸಂಸ್ಕೃತಿ ವಿಶ್ವ ಪ್ರತಿಷ್ಠಾನವು ಈ ರೀತಿಯ ಸಾಹಿತಿಗಳನ್ನು ಗುರುತಿಸಿ ಅವರಿಗೆ ಪುರಸ್ಕಾರಗಳನ್ನು ನೀಡಿ ಮತ್ತಷ್ಟು ಸಾಧನೆ ಮಾಡುವ ಕಾಯಕ ಮಾಡುತ್ತಿರುವುದು ಅಭಿನಂದನೀಯ ಎಂದರು.
ಮುಖ್ಯ ಅತಿಥಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಈ ಸಂಸ್ಥೆಯು ಕಳೆದ ಐದು ವರ್ಷಗಳಿಂದ ನಿರಂತರವಾಗಿ ನಡೆಸುತ್ತಿರುವ ತನ್ನ ವೈಶಿಷ್ಟ ಪೂರ್ಣವಾದ ಕಾರ್ಯಕ್ರಮಗಳಿಂದ ಮನೆ ಮಾತಾಗಿದೆ ಎಂದು ಶುಭ ಹಾರೈಸಿದರು.

ವೇದಿಕೆಯಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ಉಡುಪಿ ವಿಶ್ವನಾಥ್, ಶೆಣೈ, ಅಧ್ಯಕ್ಷರಾದ ಪ್ರೊ.ಶಂಕರ್, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ವ್ಯವಸ್ಥಾಪಕ ಪುರಂದರ ತಿಂಗಳಾಯ, ಕಾರ್ಯಕ್ರಮದ ಸಂಚಾಲಕಿ ಸಂಧ್ಯಾ ಶೆಣಿೈ, ಮುಂತಾದವರು ಉಪಸ್ಥಿತರಿದ್ದರು ಈ ಸಂದರ್ಭದಲ್ಲಿ ಮಲಬಾರ್ ವಿಶ್ವ ಸಾಹಿತಿ ಪುರಸ್ಕಾರ ವನ್ನು ಚೆನ್ನಪ್ಪ ಅಂಗಡಿ (ಸಮಗ್ರ ಸಾಹಿತ್ಯ), ಡಾ. ನಿಕೇತನ (ಸಂಶೋಧನೆ ಮತ್ತು ವಿಮರ್ಶೆ), ಮುದಲ್ ವಿಜಯ್ (ಕಾವ್ಯ) ಇವರಿಗೆ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಪುರಸ್ಕೃತರು ತಮ್ಮ ಮನದಾಳದ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಪ್ರತಿಷ್ಠಾನದ ಕೋಶಾಧಿಕಾರಿ ರಾಜೇಶ್ ಭಟ್, ಪಣಿಯಾಡಿ ಕಾರ್ಯಕ್ರಮ ನಿರೂಪಿಸಿದರು. ಸಂಚಾಲಕ ರವಿರಾಜ್ ಎಚ್.ಪಿ ಪ್ರಸ್ತಾವನೆಗೈದು ಸ್ವಾಗತಿಸಿದರು. ಸಂಧ್ಯಾ ಶೆಣಿೈ ವಂದಿಸಿದರು. ಸಿದ್ದ ಬಸಯ್ಯಸ್ವಾಮಿ ಚಿಕ್ಕಮಠ, ವಿದ್ಯಾ ಸರಸ್ವತಿ, ವಿದ್ಯಾ ಶ್ಯಾಮ್ ಸುಂದರ್ ಪರಿಚಯಿಸಿದರು. ದಿ.ಮೇಟಿ ಮುದಿಯಪ್ಪ ಕುಟುಂಬಸ್ಥರು ಭಾಗವಹಿಸಿದ್ದರು.