Home Latest ಪುಣೆ: ದೇವಸ್ಥಾನದ ಕಾಂಪೌಂಡ್ ಗೋಡೆ ಕುಸಿದು ಸ್ಥಳದಲ್ಲೇ 6 ಮಂದಿ ಮೃತ್ಯು…!!

ಪುಣೆ: ದೇವಸ್ಥಾನದ ಕಾಂಪೌಂಡ್ ಗೋಡೆ ಕುಸಿದು ಸ್ಥಳದಲ್ಲೇ 6 ಮಂದಿ ಮೃತ್ಯು…!!

ಪುಣೆ: ದೇವಸ್ಥಾನದ ಕಾಂಪೌಂಡ್ ಗೋಡೆ ಕುಸಿದು ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿರುವ ಘಟನೆ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೋಠೆವಾಡಿ ಗ್ರಾಮದಲ್ಲಿ ಸಂಭವಿಸಿದೆ.

ಮೋಠೆವಾಡಿ ಮಹಾರಾಷ್ಟ್ರ- ಕರ್ನಾಟಕ ಗಡಿಯ ಹಳ್ಳಿಯಾಗಿದ್ದು, ಗ್ರಾಮದ ಮುರಗಾಬಾಯಿ ದೇವಸ್ಥಾನದಲ್ಲಿ ಘಟನೆ ನಡೆದಿದೆ. ಘಟನೆಯಲ್ಲಿ 15 ಜನರಿಗೆ ಗಂಭೀರ ಗಾಯಗಳಾಗಿದೆ. ಭಾರೀ ಗಾಳಿ ಮಳೆಗೆ ಗೋಡೆ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

ಗಾಯಗೊಂಡವರಿಗೆ ಜತ್ ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನಾ ಸ್ಥಳಕ್ಕೆ ಜತ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಂಗಳವಾರ ಸಂಜೆ 5 ಗಂಟೆಯ ಸುಮಾರಿಗೆ ಘಟನೆ ನಡೆದಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.