ಬ್ರಹ್ಮಾವರ, ಜೂನ್ 27: ಹನೇಹಳ್ಳಿ ಗ್ರಾಮದ ಕಂಬಿಗರ ಕೊಡ್ಲು ಹಾಡಿಯಲ್ಲಿ 55 ವರ್ಷದ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಪ್ರಕರಣ ದಾಖಲಾಗಿದೆ.
ಪೊಲೀಸರ ಮಾಹಿತಿಯ ಪ್ರಕಾರ, ಹನೇಹಳ್ಳಿ ಗ್ರಾಮದ ಜನತಾ ಕಾಲೋನಿಯ ನಿವಾಸಿ ಕೃಷ್ಣ ಪೂಜಾರಿ (64) ಅವರ ಮನೆಯಲ್ಲಿ ವಾಸವಾಗಿದ್ದ ಅವರ ಪತ್ನಿಯ ಸಹೋದರ ವಿಶ್ವನಾಥ (55) ಅವಿವಾಹಿತರಾಗಿದ್ದು, ಮೂಲವ್ಯಾಧಿಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಜೂನ್ 26ರಂದು ಬೆಳಿಗ್ಗೆ 9ರಿಂದ 10.40 ಗಂಟೆಯ ಅವಧಿಯಲ್ಲಿ ಹನೇಹಳ್ಳಿ ಗ್ರಾಮದ ಕಂಬಿಗರ ಕೊಡ್ಲು ಹಾಡಿಯಲ್ಲಿರುವ ಗೇರು ಮರದ ಕೊಂಬೆಗೆ ಕೇಸರಿ ಬಣ್ಣದ ಬೈರಸ್ (ಹಗ್ಗ) ಬಳಸಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ಸಂಖ್ಯೆ 45/2026ರಂತೆ ಕಲಂ 194 BNSS ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.




