Home Crime ಬ್ರಹ್ಮಾವರ : ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ : ಇಬ್ಬರು ವಶಕ್ಕೆ…!!

ಬ್ರಹ್ಮಾವರ : ಕೋಳಿ ಅಂಕಕ್ಕೆ ಪೊಲೀಸರಿಂದ ದಾಳಿ : ಇಬ್ಬರು ವಶಕ್ಕೆ…!!

ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಅಕ್ರಮವಾಗಿ ಕೋಳಿ ಅಂಕ ನಡೆಯುತ್ತಿದ್ದ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿ ಇಬ್ಬರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಂಧಿತ ಆರೋಪಿಗಳು ಪ್ರವೀಣ್ ಶೆಟ್ಟಿ ಹಾಗೂ ರಾಘವೇಂದ್ರ ಎಂದು ಗುರುತಿಸಲಾಗಿದೆ.

ಬಂಧಿತರಿಂದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಇತರರು ಬ್ರಹ್ಮಾವರ ಪೊಲೀಸರು ದಾಳಿ ನಡೆಸುತ್ತಿರುವ ಸಂದರ್ಭದಲ್ಲಿ ಪರಾರಿಯಾಗಿದ್ದಾರೆ. ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ದಿನಾಂಕ 04-09-2025 ಕೆಂಜೂರು ಗ್ರಾಮದ ಬಲ್ಲೇಬೈಲು ಎಂಬಲ್ಲಿನ ಸರಕಾರಿ ಜಾಗದಲ್ಲಿ ಕೆಲವು ಜನರು ಸೇರಿಕೊಂಡು ಹಿಂಸಾತ್ಮಕವಾಗಿ ಕೋಳಿಗಳ ಕಾಲಿಗೆ ಕತ್ತಿಯನ್ನು ಕಟ್ಟಿ ಮನೋರಂಜನೆಗಾಗಿ ಹಾಗೂ ಹಣವನ್ನು ಪಣವಾಗಿ ಕಟ್ಟಿ ಜೂಜಾಟಕ್ಕಾಗಿ ಕೋಳಿ ಅಂಕವನ್ನು ಆಡುತ್ತಿದ್ದಾರೆ ಎಂಬುದಾಗಿ ಬಂದ ಖಚಿತ ಮಾಹಿತಿಯಂತೆ ಸದ್ರಿ ಸ್ಥಳದಲ್ಲಿ ಕೆಲವರು ಗುಂಪು ಸೇರಿ ಕೋಳಿಗಳ ಕಾಲಿಗೆ ಬಾಳ್ (ಕತ್ತಿ) ಅನ್ನು ಕಟ್ಟಿ ಹಿಂಸ್ಮಾತಕವಾಗಿ ಅವುಗಳು ಕಾದಾಡುವಂತೆ ಮಾಡಿ ಅವುಗಳ ಮೇಲೆ ಹಣವನ್ನು ಪಣವಾಗಿ ಕಟ್ಟಿ ಗೆದ್ದ ಕೋಳಿಯ ಮಾಲಕ ಲಾಭಗಳಿಸುತ್ತಿರುವುದು ಕಂಡು ಬಂದಿರುತ್ತದೆ. ಉಳಿದವರು ಕೋಳಿಗಳ ಕಾದಾಟವನ್ನು ನೋಡುತ್ತಾ ಕೋಳಿ ಅಂಕ ಜುಗಾರಿ ಆಟದಲ್ಲಿ ನಿರತರಾಗಿರುವುದನ್ನು ಖಚಿತಪಡಿಸಿಕೊಂಡು ಬ್ರಹ್ಮಾವರ ಪೊಲೀಸರು ದಾಳಿ ಮಾಡಿದಾಗ ಪೊಲೀಸರನ್ನು ಕಂಡು ಜನರು ಓಡಿಕೋಗಿದ್ದು, ಸಿಬ್ಬಂದಿಯವರ ಸಹಾಯದಿಂದ ಓಡಿ ಹೋಗುತ್ತಿದ್ದವರ ಪೈಕಿ ಇಬ್ಬರನ್ನು ಹಿಡಿದು ವಿಚಾರಿಸಲಾಗಿ, ಸದ್ರಿಯವರು ಕೋಳಿ ಅಂಕ ಜುಗಾರಿ ಆಟದಲ್ಲಿ ನಿರತರಾಗಿರುವುದಾಗಿ ತಿಳಿಸಿದ್ದು, ಬಳಿಕ ಹೆಸರು ವಿಚಾರಿಸಲಾಗಿ 1) ಪ್ರವೀಣ್ ಶೆಟ್ಟಿ(39), ಬೈಲು ಮನೆ, ಬಾರಾಳಿ ಕೆಂಜೂರು ಗ್ರಾಮ, 2) ರಾಘವೇಂದ್ರ(35), ಚಗರಿಬೆಟ್ಟು, ಕೆಂಜೂರು ಗ್ರಾಮ ಎಂಬುದಾಗಿ ತಿಳಿಸಿದ್ದು, ಸದ್ರಿಯವರಿಂದ ಆಟಕ್ಕೆ ಬಳಸಿದ ನಗದು 26030/- ರೂ ಹಾಗೂ ಸ್ಥಳದಲ್ಲಿ ಜೂಜಿಗೆ ಕಟ್ಟಿದ 2 ಕೋಳಿಗಳು, ಕೋಳಿಗಳ ಕಾಲಿಗೆ ಕಟ್ಟಿದ 2 ಕೋಳಿ ಬಾಳ್, ಕೋಳಿಯ ಕಾಲಿಗೆ ಕಟ್ಟಿದ 2 ನೈಲಾನ್ ಹಗ್ಗ ಪಂಚರ ಸಮಕ್ಷಮ ವಶಪಡಿಸಿಕೊಂಡಿದ್ದು, ಓಡಿಹೋಗುತ್ತಿದ್ದವರ ಬಗ್ಗೆ ವಿಚಾರಿಸಲಾಗಿ ದಿನೇಶ ಶೆಟ್ಟಿ, ಸುಂದರ ಶೆಟ್ಟಿ, ಸತೀಶ್ ಶೆಟ್ಟಿ ಬಲ್ಲೇಬೈಲು, ನಾಗರಾಜ, ಪ್ರಭಾಕರ ಹಾಗೂ ಇತರರು ಓಡಿಹೋಗಿರುವುದಾಗಿ ತಿಳಿಸಿರುತ್ತಾರೆ.

ಈ ಬಗ್ಗೆ ಬ್ರಹ್ಮಾವರ ಠಾಣೆ ಅಪರಾಧ ಕ್ರಮಾಂಕ: 182/2025 : ಕಲಂ. 87 93 KP Act US 11 Prevention of Cruelty to Animals Act. ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.