Home Crime ಉಡುಪಿ : ಮನೆಯೊಂದರಲ್ಲಿ ಬೆಳ್ಳಿ ಸಾಮಾಗ್ರಿಗಳು ಕಳ್ಳತನ…!!

ಉಡುಪಿ : ಮನೆಯೊಂದರಲ್ಲಿ ಬೆಳ್ಳಿ ಸಾಮಾಗ್ರಿಗಳು ಕಳ್ಳತನ…!!

ಉಡುಪಿ: ನಗರದ ಸಮೀಪ ಮನೆಯೊಂದರಲ್ಲಿ ಯಾರೂ ಇಲ್ಲದೆ ವೇಳೆಯಲ್ಲಿ ಕಳ್ಳರು ನುಗ್ಗಿ‌ ಬೆಳ್ಳಿ ಸಾಮಾಗ್ರಿಗಳನ್ನು ಕಳ್ಳತನ ನಡೆಸಿದ ಘಟನೆ ನಡೆದಿದೆ.

ಕೊರಂಗ್ರಪಾಡಿ ಗ್ರಾಮದ ಸುಧಾಕರ ಎಂಬವರ ಮನೆಯಲ್ಲಿ ಕಳ್ಳತನ ಪ್ರಕರಣ ನಡೆದಿದೆ.

ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣದ ವಿವರ : ಪಿರ್ಯಾದಿದಾರರಾದ ವಸಂತ (69), ಕೊರಂಗ್ರಪಾಡಿ ಗ್ರಾಮ, ಉಡುಪಿ ಇವರ ಅಣ್ಣ ಸುಧಾಕರ (70) ರವರ ಮಕ್ಕಳು ವಿದೇಶವಾದ‌ ಅಬುದಾಬಿಯಲ್ಲಿದ್ದು, ಅವರನ್ನು ನೋಡಲು ದಿನಾಂಕ 07/08/2025 ರಂದು ಅವರ ಪತ್ನಿ ಪ್ರೇಮಾ ಕಲಾ ರವರೊಂದಿಗೆ ಮನೆಗೆ ಬೀಗ ಹಾಕಿ ಅಬುದಾಬಿಗೆ ಹೋಗಿದ್ದು, ದಿನಾಂಕ 03/09/2025 ರಂದು ಬೆಳಿಗ್ಗೆ 10:00 ಗಂಟೆಗೆ ಸುಧಾಕರ ರವರ ಮನೆಯ ಬಳಿ ಇರುವ ನೆರೆ-ಕೆರೆಯವರು ಓರ್ವ ವ್ಯಕ್ತಿಯನ್ನು ಪಿರ್ಯಾದಿದಾರರ ಮನೆಗೆ ಕಳುಹಿಸಿದ್ದು, ಅತನು ಸುಧಾಕರ‌ ರವರ ಮನೆಯ ಹಿಂದಿನ ಬಾಗಿಲು ತೆರೆದಿರುವುದಾಗಿ ತಿಳಿಸಿದ್ದು, ಕೂಡಲೇ ಅವರ ಮನೆಗೆ ಹೋಗಿ ನೋಡಿದಾಗ ಯಾರೋ ಕಳ್ಳರು ಮನೆಯ ಹಿಂಬದಿ ಬಾಗಿಲಿನ ಚಿಲಕ ಮುರಿದು ಮನೆಯೊಳಗೆ ಪ್ರವೇಶಿಸಿ ಮನೆಯ ಬೆಡ್‌ ರೂಂ ನ ಕಪಾಟಿನಲ್ಲಿದ್ದ ಬಟ್ಟೆಗಳೆಲ್ಲಾ ಚೆಲ್ಲಾ-ಪಿಲ್ಲಿಮಾಡಿ, ದೇವರ ಮನೆಯಲ್ಲಿದ್ದ 1) ಬೆಳ್ಳಿ ದೀಪಗಳು-2 ಮತ್ತು 2)ಬೆಳ್ಳಿಯ ಸಣ್ಣ ಗಣೇಶ ಮೂರ್ತಿ-1 ಗಳ ಒಟ್ಟಾರೆ ಅಂದಾಜು ಮೌಲ್ಯ 6000/- ರೂಪಾಯಿಗಳು ಕಳವು ಮಾಡಿಕೊಂಡು ಹೋಗಿದ್ದು, ಪಿರ್ಯಾದಿದಾರರ ಅಣ್ಣ ಸುಧಾಕರ ‌ ರವರು ಅಬುದಾಬಿಯಿಂದ ವಾಪಸ್ಸು ಬಂದ ಮೇಲೆ ಉಳಿದ ಕಳವಾದ ಸೊತ್ತಿನ ಬಗ್ಗೆ ಮಾಹಿತಿಯನ್ನು ನೀಡುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 161/2025 ಕಲಂ: 331(4), 305 BNS ರಂತೆ ಪ್ರಕರಣ ದಾಖಲಾಗಿರುತ್ತದೆ.