Home Art & Culture “ಅಂತರ್ಯಾಮಿ” ಕನ್ನಡ ಚಿತ್ರ ತೆರೆಗೆ ಬರಲು ಸಿದ್ಧ…!!

“ಅಂತರ್ಯಾಮಿ” ಕನ್ನಡ ಚಿತ್ರ ತೆರೆಗೆ ಬರಲು ಸಿದ್ಧ…!!

ಬೆಂಗಳೂರು: ಅಂತರ್ಯಾಮಿ ಕನ್ನಡ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿ ತೆರೆಗೆ ಬರಲು ಸಿದ್ದವಾಗಿದೆ‌. ಈ ಚಿತ್ರದ ನಿರ್ದೇಶನವನ್ನು ಕೆ. ಧನಂಜಯ ಅವರು ಮಾಡಿದ್ದಾರೆ. ನವೀನ್ ಎನ್ ಜಿ ಅವರು ಈ ಚಿತ್ರದ ನಿರ್ಮಾಪಕರಾಗಿದ್ದಾರೆ.

ನಾಯಕ ನಟರಾಗಿ ಪ್ರಣಮ್ ನಾಯಕಿ ನಟಿಯಾಗಿ ಮೋಹಿರ ಆಚಾರ್ಯ ನಟಿಸಿದ್ದಾರೆ. ಇನ್ನೂ ಮಂಡ್ಯ ಸಿದ್ದು, ಕಾಮಿಡಿ ಕಿಲಾಡಿ ಉದಯ್, ಕಿಟ್ಟಿ, ಮಂಜಿವಾ,ಮುಗಿಲನ್ ಬೇಬಿ ಹಾನ್ಸಿ, ಬಾಲಕೃಷ್ಣ ಬರಗೂರು, ಹೇಮಮಾಲಿನಿ, ರೇಣುಕಾ, ರುದ್ರಮುನಿ, ಯೋಗೀಶ್ ಮುಂತಾದವರು ನಟಿಸಿದ್ದಾರೆ.

ಅಂತರ್ಯಾಮಿ ಕನ್ನಡ ಚಿತ್ರ ಉತ್ತಮ ಕಥೆಯನ್ನು ಹೊಂದಿದೆ. ಉತ್ತಮವಾಗಿ ಮೂಡಿ ಬರಲಿದೆ.

ಅಂತರ್ಯಾಮಿ ಚಲನಚಿತ್ರವು, ಪ್ರಸ್ತುತ ಸಮಾಜದಲ್ಲಿ ನಡೆಯುತ್ತಿರುವ, ವಸ್ತು ವಿಷಯ ವಾಗಿದ್ದು,,
ಇಂದಿನ ಯುವ ಪೀಳಿಗೆ ಸಾಮಾಜಿಕ ಜಾಲತಾಣದ ಗೀಳಿಗೆ ಹೇಗೆ ಬಲಿಯಾಗುತ್ತಿರುವುದರ ಪರಿಣಾಮ, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಹೇಗೆ ಭಾರತದ ಭವಿಷ್ಯದ ಅಭಿವೃದ್ಧಿ ವ್ಯವಸ್ಥೆ ಗಳಿಗೆ ಮಾರಕವಾಗಿದೆ, ವಿದೇಶಗಳಿಗೆ ಹೇಗೆ ಪೂರಕವಾಗಿದೆ ಎಂಬುದರ ಜೊತೆಗೆ, ಯುವ ಜನತೆ ಜೊತೆಗೆ ಸಾಮಾನ್ಯ ಜನತೆ ಕೂಡ ಹೇಗೆ ಇದರ ಭಗವಾಗುತ್ತಿದ್ದಾರೆ,.. ಇದನ್ನ ನಾಯಕ ಹೇಗೆ ಸರಿ ಪಡಿಸುತ್ತಾನೆ ಎಂಬುದೇ, ಈ ಕಥೆಯ ಸಾರಾಂಶ ವಾಗಿದೆ,

ಚಿತ್ರವು ಶಿಘ್ರದಲ್ಲೇ ತೆರೆಗೆ ಬರಲು ಸಿದ್ದವಾಗಿದೆ‌..ತುಮಕೂರಿನಲ್ಲಿ ssit ಕಾಲೇಜ್ನಲ್ಲಿ ಲೆಕ್ಚರರ್ ಆಗಿ ಚಿತ್ರದ ನಾಯಕ ಹಾಗೂ ನಿರ್ಮಾಪಕರು ಕಾರ್ಯ ನಿರ್ವಹಿಸುತ್ತಿದ್ದೂ,ಪ್ರಥಮ ನಿರ್ಮಾಣ ಮಾಡಿದ್ದಾರೆ.

ಈ ಹಿಂದೆ ತುಮಕೂರು ನಿಮ್ಮ ಅಭಿಮಾನಿ ಸಂಘದ ಅಧ್ಯಕ್ಷರಾದ ನವೀನ್ ( ಯುವರಾಜ್ ) ಅವರ ಗೆಳೆಯರು ಹಾಗೂ ಕಡೆ ಮನೆ ಸಿನಿಮಾ ದಲ್ಲಿ ಕಾರ್ಯಕಾರಿ ನಿರ್ಮಾಪಕರಗಿದ್ದರು.