Home Crime ನದಿಯಲ್ಲಿ ಸಿಕ್ಕಿದು ವಾಸಂತಿ ಶವ ಅಲ್ಲ, ಅವರು ಇನ್ನೂ ಜೀವಂತ ಇದ್ದಾರೆ : ಸುಜಾತ ಭಟ್...

ನದಿಯಲ್ಲಿ ಸಿಕ್ಕಿದು ವಾಸಂತಿ ಶವ ಅಲ್ಲ, ಅವರು ಇನ್ನೂ ಜೀವಂತ ಇದ್ದಾರೆ : ಸುಜಾತ ಭಟ್ ಸ್ಫೋಟಕ ಹೇಳಿಕೆ…!!


ಮಂಗಳೂರು : ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವ ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಇದೀಗ ತಿರುವು ಸಿಕ್ಕಿದೆ. ಅನನ್ಯಾ ಭಟ್ ಮಿಸ್ಸಿಂಗ್ ಪ್ರಕರಣ ಕಾಲ್ಪನಿಕ ಸೃಷ್ಟಿ ಎಂದು ಸುಜಾತಾ ಭಟ್ ಒಪ್ಪಿಕೊಂಡಿದ್ದಾರೆ. ಜೊತೆಗೆ ವಾಸಂತಿ ಇನ್ನೂ ಜೀವಂತ ಇದ್ದಾರೆ ಎಂದು ಸುಜಾತಾ ಭಟ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಅವರ ಈ ಹೇಳಿಕೆಗೆ ತನಿಖಾಧಿಕಾರಿಗಳೇ ಶಾಕ್ ಆಗಿದ್ದಾರೆ. ಆ ಮೂಲಕ ವಾಸಂತಿ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.ಚಿನ್ನಯ್ಯ ಜೊತೆ ಸುಜಾತ ಭಟ್ರನ್ನೂ ಎಸ್ಐಟಿ ಅಧಿಕಾರಿಗಳು ತೀವ್ರ ವಿಚಾರಣೆ ಮಾಡಿದ್ದಾರೆ. ಫೋಟೋ ವಿಚಾರವಾಗಿ ಸ್ಪಷ್ಟನೆ ನೀಡಿರುವ ಸುಜಾತ ಭಟ್, ಅದು ಅನನ್ಯಾ ಭಟ್‌ ಅಲ್ಲ, ಬದಲಿಗೆ ವಾಸಂತಿಯದ್ದೇ ಫೋಟೋ ಎಂದು ಬಾಂಬ್ ಸಿಡಿಸಿದ್ದಾರೆ. ಇದಕ್ಕೂ ಮೊದಲ ನದಿಯಲ್ಲಿ ಕೊಳೆತ ಸ್ಥಿತಿಯಲ್ಲಿ ವಾಸಂತಿ ಶವ ಸಿಕ್ಕಿದೆ ಅಂತಿದ್ದಾರೆ.

ಆದರೆ ಅದು ವಾಸಂತಿಯ ಶವ ಅಲ್ಲ, ಕೊಳೆತ ಶವ ವಾಸಂತಿಯದ್ದು ಎಂದು ಹೇಗೆ‌ ನಂಬಿದಿರಿ ಎಂದು ತನಿಖಾಧಿಕಾರಿಗಳಿಗೆ ಮರುಪ್ರಶ್ನೆ ಮಾಡಿದ್ದಾರೆ. ಸದ್ಯ ಸುಜಾತಾ ಭಟ್ ನೀಡಿರುವ ಮಾಹಿತಿ ಆಧಾರದಲ್ಲಿ ಎಸ್ಐಟಿಯಿಂದ ತನಿಖೆ ಮಾಡಲಾಗುತ್ತಿದೆ.