ಕಡಬ: ಗಣತಿ ಕಾರ್ಯ ಮಾಡುತ್ತಿದ್ದ ಶಿಕ್ಷಕಿಯೋರ್ವರ ಕಾರಿನ ಗಾಜನ್ನು ಹೊಡೆದು ಹಾನಿಗೊಳಿಸಿರುವ ಘಟನೆ ವರದಿಯಾಗಿದೆ.
ಕೊಣಾಲು ಸರಕಾರಿ ಪ್ರೌಢ ಶಾಲೆಯ ಶಿಕ್ಷಕಿ ರಮಣಿ ಬಿ. ಎಂಬವರು ಸಾಮಾಜಿಕ ಮತ್ತು ಶೈಕ್ಷಣಿಕ ಗಣತಿ ಕಾರ್ಯದ ಕರ್ತವ್ಯಕ್ಕೆ ನೇಮಕಗೊಂಡಿದ್ದು, ಬೆಳಿಗ್ಗೆ ಕೋಡಿಂಬಾಳ ವಾರ್ಡ್ ಸಂಖ್ಯೆ 13ರಲ್ಲಿ ಶಂಕರ ಪಾಜೋವು ಎಂಬವರ ಮನೆಯಲ್ಲಿ ಗಣತಿ ಕಾರ್ಯ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.
ಕಾರನ್ನು ಸ್ವಲ್ಪ ದೂರದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದರು. ಈ ಸಂದರ್ಭ ಶಂಕರ ಪಾಜೋವು ಅವರು ರಸ್ತೆ ಬದಿಯಲ್ಲಿದ್ದ ಕಾರಿಗೆ ಕಬ್ಬಿಣದ ರಾಡ್ ನಿಂದ ಹಾನಿಗೊಳಿಸಿ ಕಾರಿನ ಹಿಂಬದಿ ಗಾಜನ್ನು ಪುಡಿಗೈದಿದ್ದಾರೆ ಎಂದು ಹೇಳಲಾಗಿದೆ
ಈ ಕುರಿತು ರಮಣಿಯವರು ಕಡಬ ಠಾಣೆ ಹಾಗೂ ಕಡಬ ತಹಶೀಲ್ದಾರ್‌ಅವರಿಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಆರೋಪಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.