ಉಡುಪಿ: ನಗರದ ಆರ್ಯ ಗೋಲ್ಡ್ ಆ್ಯಂಡ್ ಸಿಲ್ವರ್ ಅಂಗಡಿ ಮಾಲೀಕನ ಮನೆಗೆ ನುಗ್ಗಿದ ಕಳ್ಳರು 1 ಕೆಜಿ ಅಧಿಕ ಚಿನ್ನದ ಗಟ್ಟಿ ಕಳ್ಳತನ ಮಾಡಿರುವ ಘಟನೆ ಉಡುಪಿ ಗುಂಡಿಬೈಲಿನಲ್ಲಿ ಮಂಗಳವಾರ (ಇಂದು) ಬೆಳಿಗ್ಗೆ ಸಂಭವಿಸಿದೆ.
ಆರ್ಯ ಗೋಲ್ಡ್ ಮಾಲೀಕ ಅಜಯ್ ಜಾಧವ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ಅವರ ಗುಂಡಿಬೈಲಿನ ಮನೆಗೆ ನುಗ್ಗಿದ ಕಳ್ಳರು ಒಂದು ಕೆಜಿಗೂ ಅಧಿಕ ಚಿನ್ನ ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಕಳ್ಳತನ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.