Home Crime ಕೋಟ : ವ್ಯಕ್ತಿಯೋರ್ವರಿಗೆ ಹಣ ಹೂಡಿಕೆ ನೆಪದಲ್ಲಿ ವಂಚನೆ…!!

ಕೋಟ : ವ್ಯಕ್ತಿಯೋರ್ವರಿಗೆ ಹಣ ಹೂಡಿಕೆ ನೆಪದಲ್ಲಿ ವಂಚನೆ…!!

ಕೋಟ: ಉಡುಪಿ ಜಿಲ್ಲೆಯ ಕೋಟ ಸಮೀಪ ವ್ಯಕ್ತಿಯೊಬ್ಬರಿಗೆ ಹಣ ಹೂಡಿಕೆ ನೆಪದಲ್ಲಿ ಹೆಚ್ಚಿನ ಲಾಭ ಸಿಗುವ ಆಸೆ ತೋರಿಸಿ ವಂಚನೆ ಮಾಡಿದ ಘಟನೆ ಸಂಭವಿಸಿದೆ.

ಚಿತ್ರಪಾಡಿ ನಿವಾಸಿ ಅರುಣಾ ಎಂದು ಗುರುತಿಸಲಾಗಿದೆ.

ಈ ಘಟನೆ ಸಂಬಂಧಿಸಿದಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಪ್ರಕರಣ ವಿವರ : ಪಿರ್ಯಾದಿ ಅರುಣಾ (33) ಚಿತ್ರಪಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರಲ್ಲಿ ಮಾಟ್ರಿ ಮೋನಿಯಾದಲಿ ಆರಾಧ್ಯ ಎಂಬವರು ಪಿರ್ಯಾದಿದಾರರ ದಾಖಲೆಗಳನ್ನು ಪಡೆದು ತಾನು ABHIRAM EXPORTS ಎಂಬ ಸಂಸ್ಥೆಯಲ್ಲಿ CEO ಎಂದು ಪರಿಚಯಿಸಿಕೊಂಡು forex trading ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿದ್ದಲ್ಲಿ ಹೆಚ್ಚಿನ ಲಾಭ ಸಿಗುವ ಬಗ್ಗೆ ಪಿರ್ಯಾದಿದಾರರನನು ನಂಬಿಸಿ ಹಲವಾರು UPI ID ಗಳನ್ನು ನೀಡಿ ಹಣ ಕಳುಹಿಸುವಂತೆ ತಿಳಿಸಿದ ಮೇರೆಗೆ ಪಿರ್ಯಾದಿದಾರರು ದಿನಾಂಕ:19.11.2024 ರಿಂದ ದಿನಾಂಕ 28.04.2025 ರ ಮದ್ಯಾವಧಿಯಲ್ಲಿ ಹಂತಹಂತವಾಗಿ ಒಟ್ಟು 11,50,480 ರೂಪಾಯಿ ಅನ್ನು ಕಳುಹಿಸಿದ್ದು ಆರೋಪಿತೆಯು ಸದ್ರಿ ಹಣವನ್ನು ಯಾವುದೇ trading ಸಂಸ್ಥೆಗೆ ಪಾವತಿಸದೇ ವಾಪಾಸ್ಸು ಹಿಂದುರುಗಿಸದೇ ವಂಚನೆ ಮಾಡಿರುವುದಾಗಿದೆ.

ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 149/2025 ಕಲಂ:66(C)(D) IT ACT ರಂತೆ ಪ್ರಕರಣ ದಾಖಲಾಗಿರುತ್ತದೆ.‌