ಉಡುಪಿ : ಉಡುಪಿ ಜಿಲ್ಲಾ ಯುವ ಕಾಂಗ್ರೇಸ್ ವತಿಯಿಂದ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಬಜಗೋಳಿ ಅವರ ನೇತೃತ್ವದಲ್ಲಿ ರಾಷ್ಟ್ರ ವ್ಯಾಪಿ ನಡೆಯುತ್ತಿರುವಂತಹ “ಸ್ಟಾಪ್ ವೋಟ್ ಚೊರಿ” ಸ್ಟಿಕ್ಕರ್ ಅಭಿಯಾನವನ್ನು ಉಡುಪಿ ಜಿಲ್ಲೆಯ ‘ಉಡುಪಿ ಬಸ್ ನಿಲ್ದಾಣ, ಉಡುಪಿ ತಾಲೂಕು ಕಚೇರಿ, ಚುನಾವಣಾ ಕಚೇರಿ, ಉಡುಪಿ ನಗರಸಭೆ, ಬಸ್ ಸ್ಟಾಂಡ್, ಇತರೆ ಸಾರ್ವಜನಿಕ ಸ್ಥಳಗಳಲ್ಲಿ, ವಾಹನಗಳು ಮತ್ತು ಬಸ್ ಗಳಿಗೆ “ಸ್ಟಾಪ್ ವೋಟ್ ಚೊರಿ” ಸ್ಟಿಕ್ಕರ್ ಅಂಟಿಸುವ ಮೂಲಕ ಜನ ಸಾಮಾನ್ಯರಲ್ಲಿ ಮತಗಳ್ಳತನದ ವಿರುದ್ಧ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಂಡರು .
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಮಹಾಬಲ ಕುಂದರ್, ಮುರಳಿ ಶೆಟ್ಟಿ,ಕೀರ್ತಿ ಶೆಟ್ಟಿ ನಾಗೇಶ್ ಉದ್ಯವರ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಪ್ರಖ್ಯಾತ್ ಕೊಟ್ಯಾನ್, ಪ್ರಧಾನ ಕಾರ್ಯದರ್ಶಿ ಯತೀಶ್ ಕರ್ಕೇರಾ ,ರಾಜ್ಯ ಯುವ ಕಾಂಗ್ರೆಸ್ ನ ಸುರಯ್ಯ , ಜಿಲ್ಲಾ ಯುವ ಕಾಂಗ್ರೆಸ್ ನ ಮಮತಾ ನಾಯಕ್, ಪ್ರದೀಪ್ ಶೆಟ್ಟಿ, ರೋಷನ್ ಶೆಟ್ಟಿ ನವೀನ್ ಸಾಲಿಯಾನ್, ಮಾಜಿ RGPRS ಅಧ್ಯಕ್ಷರಾದ ರೋಷಣಿ ಒಲೆವರ್ ಮಾಜಿ ಯುವ ಕಾಂಗ್ರೆಸ್ ಉಪಾಧ್ಯಕ್ಷರು ಅಹಮದ್ ಉಡುಪಿ, ಉಡುಪಿ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗದ ಉಪಾಧ್ಯಕ್ಷ ಲಕ್ಷ್ಮೀಶ್ ಶೆಟ್ಟಿ, ಬೈಂದೂರು ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಉಪಾಧ್ಯಕ್ಷರು ಮಂಜುನಾಥ್ ಶೆಟ್ಟಿ, ಕುಂದಾಪುರ ಯುವ ಕಾಂಗ್ರೆಸ್ ಮುಖಂಡರು ಪ್ರವೀಶ್ ಶೆಟ್ಟಿ, ಅಶ್ವಿನ್ ಮಡಿವಾಳ್, ಶಶಿಧರ್ ಶಹವಾಲ್ದಾರ್ ಬೆಟ್ಟು , INTUC ಬ್ಲಾಕ್ ಉಡುಪಿ ಅಧ್ಯಕ್ಷರು ಸೂರಜ್ ಕರ್ಕೇರಾ, ಗಣೇಶ್ ಉಡುಪಿ ಸಾಮಾಜಿಕ ಜಾಲತಾಣದ ಅದ್ಯಕ್ಷರಾದ ಸುರೇಂದ್ರ ಆಚಾರ್ಯ ಉಡುಪಿ ಬ್ಲಾಕ್ ಸಂಧ್ಯಾ ಸಾಲಿಯನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.








