ಕಾರ್ಕಳ : ಬಿಜೆಪಿ ಮುಖಂಡ ಹಾಗೂ ಹೊಟೇಲ್ ಉದ್ಯಮಿ ಕಾರ್ಕಳ ತಾಲೂಕಿನ ಬೈಲೂರು ನಿವಾಸಿ ಕೃಷ್ಣರಾಜ್ ಹೆಗ್ಡೆ(46) ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆ ನಡೆದಿದೆ.
ಮಂಗಳವಾರ ಮುಂಜಾನೆ ಕೃಷ್ಣರಾಜ್ ಹೆಗ್ಡೆ ತಾನು ವಾಸವಿದ್ದ ಆತ್ರಾಡಿಯ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉಡುಪಿ ಹಾಗೂ ಮಣಿಪಾಲದಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅವರು ಬಿಜೆಪಿ ಪಕ್ಷದಲ್ಲಿ ಸಕ್ರೀಯರಾಗಿದ್ದರು. ಬೈಲೂರು ಗಣೇಶೋತ್ಸವ ಹಾಗೂ ಮಾರಿಯಮ್ಮ ದೇವರ ಉತ್ಸವ ಮುಂತಾದ ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರೀಯರಾಗಿದ್ದರು.ಸ್ನೇಹ ಜೀವಿಯಾಗಿದ್ದರು.ಸಮಾಜ ಸೇವೆಯ ಕೆಲಸಗಳನ್ನು ಮಾಡುತ್ತಿದ್ದರು. ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಹಿರಿಯಡ್ಕ ಪೊಲೀಸರು ಸ್ಥಳಕ್ಕೆ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ತನಿಖೆ ಕೈಗೊಂಡಿದ್ದಾರೆ.