Home Crime ಉಳ್ಳಾಲ : ತೊಕ್ಕೊಟ್ಟು ಮೊಸರುಕುಡಿಕೆ ಉತ್ಸವದಲ್ಲಿ ಮಹಿಳಾ ಪೇದೆಯರಿಬ್ಬರ ಕರ್ತವ್ಯಕ್ಕೆ ಅಡ್ಡಿ : ಇಬ್ಬರ ಬಂಧನ..!!

ಉಳ್ಳಾಲ : ತೊಕ್ಕೊಟ್ಟು ಮೊಸರುಕುಡಿಕೆ ಉತ್ಸವದಲ್ಲಿ ಮಹಿಳಾ ಪೇದೆಯರಿಬ್ಬರ ಕರ್ತವ್ಯಕ್ಕೆ ಅಡ್ಡಿ : ಇಬ್ಬರ ಬಂಧನ..!!

ಉಳ್ಳಾಲ : ತೊಕ್ಕೊಟ್ಟು ಶ್ರೀ ಕೃಷ್ಣ ಜನ್ಮಾಷ್ಟಮಿಯ ಮೊಸರುಕುಡಿಕೆ ಉತ್ಸವದ ಮೆರವಣಿಗೆ ಸಂದರ್ಭ ಮಹಿಳಾ ಪೇದೆಗಳಿಗೆ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ.

ಅಸೈಗೋಳಿ ನಿವಾಸಿ ದೀಪಕ್ ಮತ್ತು ತೊಕ್ಕೊಟ್ಟು ನಿವಾಸಿ ಕಿರಣ್ ಎಂಬವರನ್ನು ಬಂಧಿಸಲಾಗಿದೆ.

ತೊಕ್ಕೊಟ್ಟು ಮೊಸರುಕುಡಿಕೆ ಉತ್ಸವದ ಟ್ಯಾಬ್ಲೋ ಹಾಗೂ ಣಾಸಿಕ್ ಬ್ಯಾಂಡ್ ರಾತ್ರಿ ಸುಮಾರು 11.50ಕ್ಕೆ ಒಳಪೇಟೆ ತಲುಪಿತ್ತು. ನಾಸಿಕ್ ಬ್ಯಾಂಡ್ ಜೊತೆಗೆ ಯುವಕರು ಗುಂಪು ಕಟ್ಟಿ ಡ್ಯಾನ್ಸ್ ಮಾಡುವುದರಿಂದ ಹಿಂದೆ ಇರುವ ಟ್ಯಾಬ್ಲೋಗಳಿಗೆ ಮುಂದೆ ಹೋಗಲು ಸಾಧ್ಯವಾಗುವುದಿಲ್ಲ, ಕಾಲಹರಣ ಮಾಡಲಾಗುತ್ತಿದೆ , ಇದರಿಂದ ಮಹಿಳೆಯರು, ಮಕ್ಕಳಿಗೆ ನಡೆದಾಡಲು ತೊಂದರೆ ಮಾಡುತ್ತಿದ್ದಾರೆಂದು ಬಂದೋಬಸ್ತ್ ನಲ್ಲಿದ್ದ ಪೊಲೀಸರು ನಿಯಂತ್ರಿಸಲು ಮುಂದಾಗಿದ್ದಾರೆ.

ಈ ವೇಳೆ ಮಹಿಳಾ ಪೇದೆಯರಿಬ್ಬರು ಸಂಯಮದಿoದ ನಾಸಿಕ್ ಬ್ಯಾಂಡ್ ಬಡಿಯುತ್ತಿದ್ದ ಹಾಗೂ ಡ್ಯಾನ್ಸ್ ಮಾಡುತ್ತಿದ್ದ ಯುವಕರನ್ನು ಮುಂದೆ ಹೋಗುವಂತೆ ವಿನಂತಿಸಿದ್ದಾರೆ. ಈ ವೇಳೆ ದೀಪಕ್ ಎಂಬವರು ದುರುದ್ದೇಶದಿಂದ ಕೈ ಬೆರಳುಗಳನ್ನು ಅಸಹ್ಯವಾಗಿ ಮಹಿಳಾ ಪೇದೆಗಳಿಬ್ಬರಿಗೆ ತೋರಿಸಿ, ಮುಂದಕ್ಕೆ ಹೋಗದೇ ಬೆದರಿಸಿ, ತಡೆದು ನಿಲ್ಲಿಸಿ ‘ನೀನು ಯಾರು ಮುಂದಕ್ಕೆ ಹೋಗಲು, ಪೊಲೀಸರು ಚಪ್ರಿಗಳು ಎಂದೆಲ್ಲಾ ಹೇಳಿದ್ದು, ಇದೇ ಸಂದರ್ಭ ಕಿರಣ್ ಕೂಡಾ ಸ್ಥಳದಲ್ಲೇ ಇದ್ದು, ಇಬ್ಬರನ್ನು ವಶಕ್ಕೆ ಪಡೆದುಕೊಂಡು ಬಂಧಿಸಿ ಬಿಎನ್ ಎಸ್ ಕಾಯಿದೆಯಡಿ ಮಾನಭಂಗ ಸಹಿತ ವಿವಿಧ ಕಾಯಿದೆಗಳಡಿ ಪ್ರಕರಣ ದಾಖಲಿಸಿದ್ದಾರೆ.