Home Latest ನಾಪತ್ತೆಯಾದ ಉಪನ್ಯಾಸಕರ ಶವ ಬಾವಿಯಲ್ಲಿ ಪತ್ತೆ…!

ನಾಪತ್ತೆಯಾದ ಉಪನ್ಯಾಸಕರ ಶವ ಬಾವಿಯಲ್ಲಿ ಪತ್ತೆ…!

ಉಡುಪಿ : ನಾಪತ್ತೆಯಾದ ಉಪನ್ಯಾಸಕರೊಬ್ಬರ ಶವ ಮನೆ‌ ವಠಾರದಲ್ಲಿದ್ದ ಬಾವಿಯಲ್ಲಿ ಶನಿವಾರ ಪತ್ತೆಯಾಗಿದೆ.

 

ಮೃತ ಉಪನ್ಯಾಸಕ, ಗಣಪತಿ ಭಟ್ (55ವ) ಶಿರಸಿ ಮೂಲದವರಾಗಿದ್ದು, ಅವಿವಾಹಿತರಾಗಿದ್ದು, ನಗರದ ಸಂಸ್ಕೃತ ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಎಂ.ಜಿ.ಎಂ ಕಾಲೇಜಿನ ಬಳಿ ಬಾಡಿಗೆಯಲ್ಲಿ ವಾಸವಾಗಿದ್ದರು.

 

ಮೃತರನ್ನು ಶಿರಸಿ ಮೂಲದ ಗಣಪತಿ ಭಟ್ (55ವ) ಎಂದು ಗುರುತಿಸಲಾಗಿದೆ. ಮೃತರು ನಾಪತ್ತೆಯಾದ ಬಗ್ಗೆ ನಗರ ಪೋಲಿಸ್ ಠಾಣೆಯ‌ಲ್ಲಿ ಪ್ರಕರಣ ದಾಖಲಾಗಿತ್ತು. ಗಣಪತಿ ಭಟ್ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಅಗ್ನಿ ಶಾಮಕ ದಳದ ನೆರವಿನಿಂದ ಶವವನ್ನು ಮೇಲಕ್ಕೆತ್ತಲಾಯಿತು. ನಗರ ಪೋಲಿಸ್ ಠಾಣೆಯ ಎಸ್ ಐ ನಾರಾಯಣ, ಗಣೇಶ ಡಿ,ತನಿಖಾ ಸಹಾಯಕಿ ಜಾಸ್ವ ಕಾನೂನು ಪ್ರಕ್ರಿಯೆ ನಡೆಸಿದರು.

 

ಸಮಾಜಸೇವಕ ನಿತ್ಯಾನಂದ‌ ಒಳಕಾಡುರವರು ಶವವನ್ನು ಜಿಲ್ಲಾಸ್ಪತ್ರೆಯ ಮರಣೋತ್ತರ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು ನೆರವಾದರು.