Home Karavali Karnataka ಅಶಕ್ತ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಶಾಸಕ ಸುನಿಲ್‌ ಕುಮಾರ್…!!

ಅಶಕ್ತ ಕುಟುಂಬಕ್ಕೆ ಮನೆ ನಿರ್ಮಿಸಿಕೊಟ್ಟ ಶಾಸಕ ಸುನಿಲ್‌ ಕುಮಾರ್…!!

ಹೆಬ್ರಿ : ಹೆಬ್ರಿಯ ಬಡಾಗುಡ್ಡೆಯ ಚುಕ್ರಿ ಕೊರಗ ಎಂಬವರ ಮನೆ ಸಂಪೂರ್ಣವಾಗಿ ಕುಸಿಯುವ ಹಂತದಲ್ಲಿದ್ದು, ಅವರ ಕುಟುಂಬದ ಅಶಕ್ತ ಪರಿಸ್ಥಿತಿಯನ್ನು ಮನಗಂಡ ಶಾಸಕ ಸುನಿಲ್‌ ಕುಮಾರ್‌ ಅವರು ನೂತನ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಅ.19ರಂದು ಚುಕ್ರಿ ಅವರಿಗೆ ಶಾಸಕರು ಮನೆ ಹಸ್ತಾಂತರಿಸಿದರು.

ಈ ಸಂದರ್ಭ ಪ್ರಮುಖರಾದ ಸತೀಶ್ ಪೈ , ಲಕ್ಷ್ಮೀ ನಾರಾಯಣ ನಾಯಕ್, ತಾರಾನಾಥ್ ಬಂಗೇರ, ಸುಧಾಕರ್ ಹೆಗ್ಡೆ, ಅರುಣ್ ಶೆಟ್ಟಿ ಗಣೇಶ್ ಕುಮಾರ್, ಹೆಚ್. ಕೆ. ಸುಧಾಕರ್, ಸುರೇಶ್ ಭಂಡಾರಿ, ಪ್ರಸಾದ್ ಭಂಡಾರಿ, ಶಶಿಧರ್ ಭೋಜ ಶೆಟ್ಟಿ, ಚುಕ್ರಿ ಹಾಗೂ ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.