ಮಂಗಳೂರು : ಮಂಗಳೂರನ್ನು ಡ್ರಗ್ಸ್ ಸಿಟಿ ಮಾಡಲು ಮುಂದಾಗಿದ್ದ 6 ಮಂದಿ ಡ್ರಗ್ ಪೆಡ್ಲರ್ ಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದು, ಅವರಿಗೆ ಡ್ರಗ್ ಸಪ್ಲೈ ಮಾಡುತ್ತಿದ್ದ ಪ್ರಮುಖ ಡ್ರಗ್ ಸಪ್ಲೈಯರ್ ಉಂಗಾಂಡಾ ಮೂಲದ ಮಹಿಳೆಯನ್ನೂ ಅರೆಸ್ಟ್ ಮಾಡುವ ಮೂಲಕ ಮಂಗಳೂರು ಪೊಲೀಸರು ಪ್ರಮುಖ ಡ್ರಗ್ ರಾಕೆಟ್ ನ್ನು ಭೇದಿಸಿದ್ದಾರೆ.
ಬಂಧಿತನ್ನು ಉಂಗಾಂಡಾ ಮೂಲದ ಸದ್ಯ ಬೆಂಗಳೂರಿನಲ್ಲಿರುವ ಮಹಿಳೆ ಜಲೀಯಾ ಜಲ್ವಾಂಗ್ ಎಂದು ಗುರುತಿಸಲಾಗಿದೆ.
ಈಕೆಯನ್ನು ಜಿಗಣಿ ಪರಿಸರದಲ್ಲಿ 4 ಕೆಜಿ ಎಂಡಿಎಂಎಯೊಂದಿಗೆ ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಡ್ರಗ್ ಪೆಡ್ಲರ್ ಗಳಾದ ಕುಂದಾಪುರ ನಿವಾಸಿ ಮೊಹಮ್ಮದ್ ಶಿಯಾಬ್ @ ಶಿಯಾಬ್ ( 22), ಉಳ್ಳಾಲ ನಿವಾಸಿ ಮೊಹಮ್ಮದ್ ನೌಷದ್ @ ನೌಷದ್ ಪ್ರಾಯ(29), ಬೆಂಗ್ರೆ ನಿವಾಸಿ ಇಮ್ರಾನ್ @ ಇಂಬ (27), ಬಂಟ್ವಾಳದ ನಿವಾಸಿ ನಿಸಾರ್ ಅಹಮ್ಮದ್( 36) ಎಂಬುವರನ್ನು ಮುಲ್ಕಿ ಪೊಲೀಸರು ಅರೆಸ್ಟ್ ಮಾಡಿದ್ದು, ಅವರಿಂದ 524 ಗ್ರಾಂ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆಯಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯ ಪೊಲೀಸರು ಉಡುಪಿ ಮೂಲದ ಮೊಹಮ್ಮದ್ ಇಕ್ಬಾಲ್ (30), ಶೆಹರಾಜ್ ಶಾರೂಕ್ (25) ಎಂಬ ಇಬ್ಬರನ್ನು ಅರೆಸ್ಟ್ ಮಾಡಿದ್ದು, ಇವರಿಂದ 200 ಗ್ರಾಂ ಎಂಡಿಎಂಎ ಡ್ರಗ್ಸ್ ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರು ಜನರಿಗೂ ಬೆಂಗಳೂರಿನಲ್ಲಿ ಅರೆಸ್ಟ್ ಆಗಿರುವ ಉಂಗಾಂಡಾ ಮೂಲದ ಮಹಿಳೆ ಡ್ರಗ್ಸ್ ಸಪ್ಲೈ ಮಾಡುತ್ತಿದ್ದಳು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಉಂಗಾಂಡಾ ಮಹಿಳೆ ಬಂಧನದೊಂದಿಗೆ ಮಂಗಳೂರಿಗೆ ಸಪ್ಲೈ ಆಗುತ್ತಿದ್ದ ಡ್ರಗ್ಸ್ ನ ನೆಟ್ವರ್ಕ್ ಬಂದ್ ಆಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಅರೆಸ್ಟ್ ಆಗಿರುವ ಉಂಗಾಂಡಾ ಮಹಿಳೆ ತನ್ನೊಂದಿಗೆ ಸುಮಾರು 4 ಕೆಜಿ ಎಂಡಿಎಂಎ ಡ್ರಗ್ಸ್ ನ್ನು ಹೊಂದಿದ್ದು, ಅದರ ಮೌಲ್ಯ ಸುಮಾರು 4 ಕೋಟಿ ಎಂದು ಅಂದಾಜಿಸಲಾಗಿದೆ. ಅಷ್ಟೂ ಡ್ರಗ್ ಈ ಬಂಧಿತ ಆರು ಮಂದಿಯ ಮೂಲಕ ಜಿಲ್ಲೆಗೆ ಬರುವ ಸಾಧ್ಯತೆ ಇತ್ತು. ಮಂಗಳೂರು ಪೊಲೀಸರ ಕಾರ್ಯಾಚರಣೆ ಮೂಲಕ ಅತೀ ದೊಡ್ಡ ಡ್ರಗ್ ರಾಕೆಟ್ ನ್ನು ಭೇದಿಸಿದ್ದಾರೆ.




