Home Crime ಉಡುಪಿ : ಯುವಕನೋರ್ವ ನಾಪತ್ತೆ…!!

ಉಡುಪಿ : ಯುವಕನೋರ್ವ ನಾಪತ್ತೆ…!!

ಉಡುಪಿ: ನಗರದಲ್ಲಿ ಅಮೆಜಾನ್ ಕಂಪನಿಯಲ್ಲಿ ವರ್ಕ್ ಪ್ರಮ್ ಹೋಂ ಕೆಲಸ ಮಾಡುತ್ತಿದ್ದ ಯುವಕನೋರ್ವ ನಾಪತ್ತೆಯಾದ ಘಟನೆ ನಡೆದಿದೆ.

ನಾಪತ್ತೆಯಾದ ಯುವಕ ಶಿವಳ್ಳಿ ಗ್ರಾಮದ ವಿಶ್ವಾಸ್ ಎಂದು ತಿಳಿದು ಬಂದಿದೆ.

ಪ್ರಕರಣ ಸಾರಾಂಶ : ಪಿರ್ಯಾದಿದಾರರಾದ ವಿಘ್ನೇಶ್‌ (32), ಶಿವಳ್ಳಿ ಗ್ರಾಮ, ಉಡುಪಿ ಇವರ ತಮ್ಮ ವಿಶ್ವಾಸ್ (28) ರವರು ಅಮೆಜಾನ್ ಕಂಪನಿಯಲ್ಲಿ ವರ್ಕ್ ಫ್ರಮ್ ಹೋಂ ಕೆಲಸವನ್ನು ಮಾಡುತ್ತಿದ್ದು, ವಿಶ್ವಾಸ್ ರವರು ದಿನಾಂಕ 12/08/2025 ರಂದು ರಾತ್ರಿ 8:30 ಗಂಟೆಗೆ ಕೆಲಸದ ನಿಮಿತ್ತ ಹೊರಗೆ ಹೋಗುವುದಾಗಿ ಹೇಳಿ ಮನೆಯಿಂದ ಹೊರಟು ಹೋದವರು ದಿನಾಂಕ 13/08/2025 ರಂದು ಬೆಳಿಗ್ಗೆ 04:00 ಗಂಟೆಯಾದರೂ ಮನೆಗೆ ವಾಪಸ್ಸು ಬಾರದೇ ಕಾಣೆಯಾಗಿರುತ್ತಾರೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 153/2025 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.