ಮಣಿಪಾಲ : ಈಶ್ವರನಗರದ ಅಪಾರ್ಟ್‌ಮೆಂಟ್ ಒಂದರ ರೂಮ್ ನಲ್ಲಿ ಅಕ್ರಮವಾಗಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಾಹಿತಿ ಮೇರೆಗೆ ಮಣಿಪಾಲ ಪೊಲೀಸರು ದಾಳಿ ನಡೆಸಿ ಓರ್ವನನ್ನು ಬಂಧಿಸಿದ್ದಾರೆ.
ಒರ್ವ ಮಹಿಳೆಯನ್ನು ಪೊಲೀಸರು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿ ಹೊನ್ನಾವರದ ಗಣೇಶ್ ಗಣಪ ನಾಯ್ಕ್ ಎಂದು ಗುರುತಿಸಲಾಗಿದೆ.
ಮತ್ತೋರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.ಮಣಿಪಾಲ ಪೊಲೀಸರು ಶೋಧ ಕಾರ್ಯ ಮುಂದುವರೆಸಿದ್ದಾರೆ.
ಪ್ರಕರಣ ಸಾರಾಂಶ : ದಿನಾಂಕ: 16/07/2025 ರಂದು 17:00 ಗಂಟೆಗೆ ಮಣಿಪಾಲ ಠಾಣಾ ಪೊಲೀಸ್ ಇನ್ಸ್ಪೆಕ್ಟರ್ ರವರಿಗೆ ಹೆರ್ಗ ಗ್ರಾಮದ ಈಶ್ವರನಗರ 20 ನೇ ಕ್ರಾಸ್ ನ ಬಳಿ ಇರುವ ಮಾಲಸಾ ಎಮರಾಲ್ಡ್ ಅಪಾರ್ಟ್‌ಮೆಂಟ್ ನ ಮೊದಲನೇ ಮಹಡಿಯಲ್ಲಿನ ರೂಮ್ ನಂಬ್ರ: 103 ಮನೆಯಲ್ಲಿ ಮಹಿಳೆಯನ್ನು ಅಕ್ರಮ ಲಾಭಕ್ಕಾಗಿ ಬಲವಂತವಾಗಿ ಇರಿಸಿ ಅಕ್ರಮ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂದು ಮಾಹಿತಿ ಬಂದಿದ್ದು, ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ, ನೊಂದ ಮಹಿಳೆಯನ್ನು ರಕ್ಷಿಸಿ ಆರೋಪಿ ಗಣೇಶ್ ಗಣಪ ನಾಯ್ಕ್ ಪ್ರಾಯ 38 ವರ್ಷ ತಂದೆ ದಿ ಗಣಪ ನಾಯ್ಕ್ ವಾಸ ಶ್ರೀಕಾಂತ ನಿಲಯ ಹೊಳೆಬದಿ ಕೇರಿ ಜಳವಳ್ಳಿ ಗ್ರಾಮ ಹೊನ್ನಾವರ ತಾಲೂಕು ಎಂಬತನನ್ನು ದಸ್ತಾಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇನ್ನೊಬ್ಬ ಆರೋಪಿ ಸ್ಥಳದಿಂದ ಪರಾರಿಯಾಗಿರುತ್ತಾನೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ : 129-2025 ಕಲಂ: 143 BNS & 3,4,5,6 ITP Act ರಂತೆ ಪ್ರಕರಣದ ಕಲಿಸಿಕೊಳ್ಳಲಾಗಿದೆ.