Home Crime ಮಂಗಳೂರು : ಗಾಂಜಾ ಮಾರಾಟ : ಓರ್ವ ಅರೆಸ್ಟ್…!!

ಮಂಗಳೂರು : ಗಾಂಜಾ ಮಾರಾಟ : ಓರ್ವ ಅರೆಸ್ಟ್…!!

ಮಂಗಳೂರು : ನಗರದಲ್ಲಿ ಅಕ್ರಮವಾಗಿ ಗಾಂಜಾ ‌ಮಾರಾಟ ಮಾಡುತ್ತಿದ್ದ ಮಾಹಿತಿ ಮೇರೆಗೆ ‌ಸಿಸಿಬಿ ಪೊಲೀಸರು ಆರೋಪಿಯನ್ನು ‌ಬಂಧಿಸಿದ್ದಾರೆ.

ಬಂಧಿತ ಆರೋಪಿ ಮೊಹಮ್ಮದ್‌ ಸಲೀಂ ಕೆ ಎಂದು ಗುರುತಿಸಲಾಗಿದೆ.

ಬಂಧಿತ ಆರೋಪಿಯಿಂದ ಸಿಸಿಬಿ ಪೊಲೀಸರು ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಪ್ರಕರಣದ ಸಾರಾಂಶ : ದಿನಾಂಕ. 11-8-2025 ರಂದು ಪ್ರಕರಣದ ಫಿರ್ಯಾದಿದಾರರಾದ ಮಂಗಳೂರು ಸಿಸಿಬಿ ಘಟಕದ ಪೊಲೀಸ್ ಉಪ-ನಿರೀಕ್ಷಕರಾದ ಸುದೀಪ್.ಎಂ.ವಿ. ರವರಿಗೆ ಮಾದಕ ವಸ್ತು ಸಾಗಾಟ ಹಾಗೂ ಮಾರಾಟದ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ಬೆಳಿಗ್ಗೆ 9-00 ಗಂಟೆಗೆ ತಲಪಾಡಿ ಗ್ರಾಮದ ತಲಪಾಡಿ ಟೋಲ್ ಪ್ಲಾಜಾಗೆ ಹೋಗುವ ರಸ್ತೆಯ ಪೂರ್ವ ಭಾಗದ ರಸ್ತೆಯ ಬದಿಯಲ್ಲಿ ಆರೋಪಿ ಮೊಹಮ್ಮದ್ ಸಲೀಂ.ಕೆ. ಎಂಬಾತನು ಯಾವುದೇ ಪರವಾನಿಗೆ ಇಲ್ಲದೆ ಅನಧಿಕೃತವಾಗಿ ಗಾಂಜಾ ಮಾರಾಟ ಮಾಡುವ ಉದ್ದೇಶದಿಂದ ಸುಮಾರು 2.035 ಕೆಜಿ ಮಾದಕ ವಸ್ತು ಗಾಂಜಾ ತುಂಬಿದ ಪ್ಯಾಕೇಟನ್ನು ಬ್ಯಾಗ್ ನಲ್ಲಿ ಇಟ್ಟು ಹಣಕ್ಕಾಗಿ ಗಿರಾಕಿಗಳಿಗೆ ಗಾಂಜಾ ಮಾರಾಟ ಮಾಡುತ್ತಿದ್ದವನನ್ನು ಪತ್ತೆ ಮಾಡಿದ್ದು, ಆರೋಪಿತನನ್ನು ಬೆಳಿಗ್ಗೆ 9:10 ಗಂಟೆಗೆ ದಸ್ತಗಿರ ಮಾಡಿ ಆತನ ವಶದಲ್ಲಿ ದೊರೆತ 1)ಸುಮಾರು 2.035 ಕೆಜಿ ಮಾದಕ ವಸ್ತು ಗಾಂಜಾ- ಅಂದಾಜು ಮೌಲ್ಯ ರೂ.60,000/- 2)ವೀವೋ ಕಂಪೆನಿಯ ವಿವೋ ವೈ28 ಎಸ್5ಜಿ ಹೆಸರಿನ ಚಾಲಕೆಟ್ ಬಣ್ಣದ ವಿ2351 ಮೊಬೈಲ್ ಪೋನ್ ಒಂದು. ಅಂದಾಜು ಮೌಲ್ಯ ರೂ.10,000/- 3)ಬೂದು ಮತ್ತು ಗುಲಾಬಿ ಬಣ್ಣದ ಏರೋ ಎಂದು ಬರೆದಿರುವ ಬ್ಯಾಗ್ ಒಂದು. ಈ ಎಲ್ಲಾ ಸೊತ್ತುಗಳನ್ನು ಪಂಚರ ಸಮಕ್ಷಮದಲ್ಲಿ ಮಹಜರು ಮುಖೇನ ಸ್ವಾಧೀನಪಡಿಸಿಕೊಂಡು ಆರೋಪಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಫಿರ್ಯಾದಿದಾರರು ನೀಡಿದ ದೂರಿನ ಮೇರೆಗೆ ದಾಖಲಾದ ಪ್ರಕರಣದ ಸಾರಾಂಶ.