Home Crime ಕಾರಾಗೃಹದಲ್ಲಿ ಗಾಂಜಾ, ಮೊಬೈಲ್ ಪತ್ತೆ…!

ಕಾರಾಗೃಹದಲ್ಲಿ ಗಾಂಜಾ, ಮೊಬೈಲ್ ಪತ್ತೆ…!

ಬೆಂಗಳೂರಿನ ಪರಪ್ಪನ ಅಗ್ರಹಾರ ಜೇಲಿನಲ್ಲಿ ಕೈದಿಗಳು ಗಾಂಜಾ ಡ್ರಗ್ಸ್ ಸಿಗರೇಟ್ ಸೇರಿದಂತೆ ಇತರೆ ಮಾದಕ ವಸ್ತುಗಳ ಪೂರೈಕೆ ಆಗುತ್ತಿರುವ ಬಗ್ಗೆ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು ಆದರೆ ಇದೀಗ ಮಂಡ್ಯದ ಕಾರಾಗೃಹದಲ್ಲೂ ಕೂಡ ಗಾಂಜಾ ಹಾಗೂ ಮೊಬೈಲ್ ಗಳು ಪತ್ತೆಯಾಗಿವೆ.

 

ಸೀನಿಮಿಯ ಶೈಲಿಯಲ್ಲಿ ಗಾಂಜಾ ಜೈಲಿಗೆ ಪೂರೈಕೆ ಆಗುತ್ತಿದ್ದು, ಕಾರಾಗೃಹದ ಸಿಸಿಟಿವಿ ಕ್ಯಾಮೆರಾದಲ್ಲಿ ಕೈದಿಗಳ ಕಳ್ಳಾಟ ಇದೀಗ ಬಯಲಾಗಿದೆ.

 

ಜೈಲಿನ ಕಾಂಪೌಂಡ್ ಬಳಿ ಬೈಕ್ ನಲ್ಲಿ ಬಂದಂತಹ ಇಬ್ಬರು ಕದೀಮರು ಪ್ಲಾಸ್ಟಿಕ್ ಸುತ್ತಿದಂತಹ ಬಾಲ್ ಅನ್ನು ಕಾಂಪೌಂಡ್ ಒಳಗಡೆ ಎಸೆದಿದ್ದಾರೆ. ಚೆಂಡು ಒಳಗಡೆ ಮೊಬೈಲ್ ಮತ್ತು ಗಾಂಜಾ ಇಟ್ಟಿದ್ದಾರೆ. ಬಳಿಕ ಈ ಬಾಲನ್ನು ಕೈದಿ ನಾಗ ಎಂಬಾತ ಎತ್ತಿಕೊಂಡಿದ್ದಾನೆ. ಎಲ್ಲಾ ಚಲನವಲನಗಳನ್ನು ಜೈಲಾಧಿಕಾರಿಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಗಮನಿಸಿದ್ದಾರೆ.

 

ನಂತರ ನಾಗನ ಸೆಲ್ ಪರಿಶೀಲನೆ ಮಾಡಿದ ಬಾಲ್ ಓಪನ್ ಮಾಡಿದಾಗ ಹತ್ತು ಗ್ರಾಂ ಗಾಂಜಾ ಮತ್ತು ಒಂದು ಮೊಬೈಲ್ ಪತ್ತೆಯಾಗಿದೆ. ಮಂಡ್ಯದ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.