ಉಡುಪಿಯ ಕೇರಳ ಕಲ್ಚರಲ್ ಸೊಸಿಯಲ್ ಸೆಂಟರ್ ಸಂಸ್ಥೆಯ ಪದಾಧಿಕಾರಿಗಳು, ರೈಲ್ವೇ ಇಲಾಖೆಯ ಅಧಿಕಾರಿಗಳು ರಕ್ಷಿಸಿದ್ದ, ಕೇರಳ ಮೂಲದ ಯುವಕನ ವಾರಸುದಾರರನ್ನು ಪತ್ತೆಗೊಳಿಸಿ ಹಸ್ತಾಂತರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ಪ್ರಯಾಣಚೀಟಿ ರಹಿತವಾಗಿ ಪ್ರಯಾಣಿಸುತ್ತಿದ್ದ ಯುವಕನೊಬ್ಬ ಚಲಿಸುತ್ತಿದ್ದ ರೈಲು ಗಾಡಿಯ ಬಾಗಿಲಿನಿಂದ ಹೊರ ಜಿಗಿಯಲು ಯತ್ನಿಸುತ್ತಿದ್ದಾಗ, ಕರ್ತವ್ಯ ನಿರ್ವಸುತ್ತಿದ್ದ ಪ್ರಯಾಣಚೀಟಿ ತಪಾಸಣಾಧಿಕಾರಿ ಬಾಬು ಅವರ ಸಮಯಪ್ರಜ್ಞೆಯಿಂದ ರಕ್ಷಿಸಲ್ಪಿಟ್ಟಿರುವ ನಡೆದಿತ್ತು.
ಕೇರಳದಿಂದ ಮುಂಬೈಗೆ ತೆರಳುತ್ತಿದ್ದ ರೈಲು, ಇನ್ನಂಜೆ ರೈಲು ನಿಲ್ದಾಣದ ಸನಿಹ ಬಂದಾಗ ಘಟನೆ ನಡೆದಿತ್ತು. ಬಳಿಕ ಬಾಬು ಅವರು, ರಕ್ಷಿಸಿದ್ದ ಯುವಕನನ್ನು ಇಂದ್ರಾಳಿ ರೈಲು ನಿಲ್ದಾಣದ ಆರ್ ಪಿ ಎಫ್ ಕಛೇರಿ ವಶಕ್ಕೆ ಒಪ್ಪಿಸಿದರು. ಯುವಕ ಮನೋರೋಗಿ ಎಂದು ತಿಳಿದು ಬಂದಿರುವುದರಿಂದ ರೈಲ್ವೆ ಪೋಲಿಸರು ಸಮಾಜಸೇವಕ ನಿತ್ಯಾನಂದ ಒಳಕಾಡು ಅವರ ನೆರವು ಪಡೆದು, ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲುಪಡಿಸಿದ್ದರು. ಬಳಿಕ ಒಳಕಾಡುವರು ಯುವಕನ ಕೇರಳ ಕಲ್ಚರಲ್ ಸೊಸಿಯಲ್ ಸೆಂಟರಿನ ನೆರವುಪಡೆದರು. ತಕ್ಷಣ ಸ್ಪಂದಿಸಿದ ಸೆಂಟರಿನ ಅಧ್ಯಕ್ಷ ಸುಗುಣ ಕುಮಾರ್, ಕಾರ್ಯದರ್ಶಿ ಬೀನೆಶ್, ಹಾಗೂ ಇತರ ಸದಸ್ಯರು ಅಪರಿಚಿತ ಯುವಕನ ವಿವರಗಳನ್ನು ಕೇರಳ ರಾಜ್ಯದ ವಿವಿಧ ಸಾಮಾಜಿಕ ಜಾಲತಾಣದಲ್ಲಿ ಹರಿದುಬಿಟ್ಟು ಸಂಬಂಧಿಕರ ಪತ್ತೆಗೊಳಿಸುವಲ್ಲಿ ಯಶಸ್ವಿಯಾದರು.





