ಕುಂದಾಪುರ:- ಸಮಾಜ ಸೇವೆ ಮಾಡುವುದು ಯಾವತ್ತಿಗೂ ತೋರ್ಪಡಿಕೆಯ ಕೆಲಸವಾಗಬಾರದು. ಅದು ನಮ್ಮೆಲ್ಲರ ಬದುಕಿನ ನಿತ್ಯ ಕರ್ತವ್ಯವಾಗಬೇಕು ಎಂದು ಕೋಟ ಗೀತಾನಂದ ಫೌಂಡೇಶನ್ ಇದರ ಪ್ರವರ್ತಕರಾದ ಆನಂದ ಸಿ.ಕುಂದರ್ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಏ.12 ರಂದು ಕೋಟದಲ್ಲಿ ನಡೆದ ಜೈ ಕುಂದಾಪ್ರ ಸೇವಾ ಟ್ರಸ್ಟ್ (ರಿ.) ಇದರ ದಶಮಾನೋತ್ಸವ ಕಾರ್ಯಕ್ರಮದ ಜೈ ಕುಂದಾಪ್ರ ಸಂಭ್ರಮ -2026 ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ಸದೃಢ ಭಾರತವನ್ನು ಕಟ್ಟುವಲ್ಲಿ ಯುವ ಮನಸ್ಸುಗಳು ಇಂತಹ ಸಮಾಜ ಸೇವೆ ಮಾಡುವ ಸಂಘಟನೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ಇದರ ಪ್ರವರ್ತಕರಾದ ಗೋವಿಂದ ಬಾಬು ಪೂಜಾರಿ ವಹಿಸಿದ್ದರು.

ಸಭಾ ಕಾರ್ಯಕ್ರಮದಲ್ಲಿ ಸಮಾಜ ಸೇವೆಯ ಶ್ರೇಷ್ಠ ಸಂಘಟನೆಯಾದ ಕೋಟದ ಪಂಚವರ್ಣ ಯುವಕ ಮಂಡಲ ಸಂಸ್ಥೆಗೆ ಜೈ ಕುಂದಾಪ್ರ ಸೇವಾ ಪುರಸ್ಕಾರ -2026 ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜೊತೆಯಲ್ಲಿ ಸಮಾಜ ಸೇವೆ ಕ್ಷೇತ್ರದಲ್ಲಿ ಸಾಧನೆ ಮಾಡಿದ
ಕೆ. ಶ್ರೀಕಾಂತ್ ಶೈಣೈ, ಧಾರ್ಮಿಕ ಕ್ಷೇತ್ರದಲ್ಲಿ ಕೆ.ಭಾಸ್ಕರ್ ಸ್ವಾಮಿ, ಕೃಷಿ ಕ್ಷೇತ್ರದಲ್ಲಿ ಪಾರಂಪಳ್ಳಿ ರವೀಂದ್ರ ಐತಾಳ್ ಅವರಿಗೆ ಜೈ ಕುಂದಾಪ್ರ ಸಾಧಕ ಪ್ರಶಸ್ತಿಯನ್ನು* ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಅನೇಕ ಅಶಕ್ತರಿಗೆ ನೆರವು, ವೀಲ್ ಚೇರ್ ಹಸ್ತಾಂತರ, ವಾಟರ್ ಬೆಡ್ ಹಸ್ತಾಂತರ ಹಾಗೂ ಸರಿ ಸುಮಾರು ರೂ. 2 ಲಕ್ಷ ವೆಚ್ಚದ ಧನ ಸಹಾಯವನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಉದ್ಯಮಿಗಳಾದ ಪ್ರಕಾಶ್ ಶೆಟ್ಟಿ, ಸತೀಶ್ ಶೆಟ್ಟಿ, ಆದಿತ್ಯ ಕೋಟ, ಕುಂದಾಪುರದ ವಕೀಲರಾದ ನೀಲ್ ಪೆರಾರ, ಜಯರಾಮ ಕುಲಾಲ್ ಜನ್ನಾಡಿ, ಕೃಷಿಕರಾದ ಅವಿನಾಶ್ ಬಳ್ಮನೆ, ಪ್ರಥಮ ದರ್ಜೆ ವಿದ್ಯುತ್ ಗುತ್ತಿಗೆದಾರರಾದ ಕೆ.ಆರ್. ನಾಯಕ್, ರಾಷ್ಟ್ರೀಯ ಮಾನವ ಹಕ್ಕುಗಳ ರಾಜ್ಯ ಪ್ರಧಾನ ಕಾರ್ಯದರ್ಶಿ ದಿನೇಶ್ ಗಾಣಿಗ ಕೋಟ, ಉಡುಪಿಯ ವಿಕ್ಕಿ ಮೊಬೈಲ್ಸ್ ಮಾಲಕರಾದ ವಿವೇಕ್ ಜಿ. ಸುವರ್ಣ, ಜೈ ಕುಂದಾಪ್ರ ಸೇವಾ ಟ್ರಸ್ಟ್ ಸಂಚಾಲಕರಾದ ಪುಂಡಲೀಕ ಮೊಗವೀರ್, ಜಯರಾಜ್ ಸಾಲಿಯಾನ್ ಪಡುಕರೆ, ಜಗನ್ನಾಥ ಕುಂದಾಪುರ,ಮಹಿಳಾ ಘಟಕದ ದಿವ್ಯ ಕುಂದಾಪುರ ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರವಿ ಬನ್ನಾಡಿ ಅವರಿಂದ ಸಂಗೀತ ಸಂಜೆ, ಪ್ರಕಾಶ್ ಹೆಮ್ಮಾಡಿ ಅವರ ಜಾದೂ ಪ್ರದರ್ಶನ ಹಾಗೂ ಮಂಗಳೂರಿನ ತ್ರಿನೇತ್ರ ಕಲಾವಿದರಿಂದ “ಬ್ರಹ್ಮ ರಕ್ಕಸೆ” ನಾಟಕ ಪ್ರದರ್ಶನ ನಡೆಯಿತು.
ಕಾರ್ಯಕ್ರಮವನ್ನು ನಿರೂಪಕರಾದ ಮಂಜುನಾಥ ಹಿಲಿಯಾಣ ಹಾಗೂ ಪ್ರೀತಿ ಮಣಿಪಾಲ ನಿರೂಪಿಸಿದರು.





