ಬಜಪೆ: ಮಂಗಳೂರು ನಗರದ ಬಜ್ಪೆಯ ಪಡುಪೆರಾರ ಕೊರಕಂಬ್ಳದ ಅಪ್ಪು (45) ಅವರು ಬಜಪೆ -ಕೈಕಂಬ ರಸ್ತೆಯಲ್ಲಿನ ಲಿಟ್ಲ ಫ್ಲವರ್ ಶಾಲಾ ಬಳಿಯ ಅಂಗಡಿಯ ಮೇಲೆ ಮರದ ಅಡ್ಡಕ್ಕೆ ನೈಲಾನ್ ಹಗ್ಗದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಭವಿಸಿದೆ.
ಇವರು ಮಂಗಳವಾರ ಸಂಜೆಯಿಂದ ನಾಪತ್ತೆಯಾಗಿದ್ದರು. ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ. ಕೂಲಿ ಕಾರ್ಮಿಕರಾಗಿದ್ದ ಅವರು ಪತ್ನಿ ಹಾಗೂ ಪುತ್ರನನ್ನು ಆಗಲಿದ್ದಾರೆ.