ಉಡುಪಿ: ನಗರದ ಸಮೀಪ ಕೂಲಿ ಕಾರ್ಮಿಕನೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ಯುವಕ ಸತೀಶ್ ಎಂದು ತಿಳಿದು ಬಂದಿದೆ.
ಘಟನೆ ವಿವರ : ಪಿರ್ಯಾದಿದಾರರಾದ ಶಾಮಪ್ಪ (38), ಕೊಪ್ಪಳ ಜಿಲ್ಲೆ ಇವರ ತಮ್ಮ ಸತೀಶ್ (19) ರವರು ಉಡುಪಿ ತಾಲೂಕು ಪುತ್ತೂರು ಗ್ರಾಮದ ನಿಟ್ಟೂರಿನಲ್ಲಿ ಶೇಖರ ಮೇಸ್ತ್ರಿ ಎಂಬುವವರ ಬಾಡಿಗೆ ಮನೆಯಲ್ಲಿ ವಾಸಮಾಡಿಕೊಂಡಿದ್ದು, ಉಡುಪಿಯ ಪರಿಸರದಲ್ಲಿ ಕೂಲಿ ಕೆಲಸವನ್ನು ಮಾಡಿಕೊಂಡಿದ್ದು, ದಿನಾಂಕ: 03/08/2025 ರಂದು ಸತೀಶ್ ರವರು ಕೂಲಿ ಕೆಲಸವನ್ನು ಮುಗಿಸಿ ಮಧ್ಯಾಹ್ನ 3:45 ಗಂಟೆಗೆ ಮನೆಗೆ ಬಂದಿದ್ದು, ಆ ಸಮಯದಲ್ಲಿ ಪಿರ್ಯಾದಿದಾರರ ಹೆಂಡತಿ ಕರಿಮಣಿ ಸರವನ್ನು ಸರಿಪಡಿಸಲು ಅವರ ಮನೆಯ ಪಕ್ಕದಲ್ಲಿಯೇ ಇದ್ದ ಚಿಕ್ಕಮ್ಮನ ಮನೆಗೆ ಹೋಗಿದ್ದು, ಸ್ವಲ್ಪ ಸಮಯದಲ್ಲಿಯೇ ಮನೆಯ ಬಳಿ ಬೊಬ್ಬೆ ಹಾಕುತ್ತಿರುವ ಧ್ವನಿ ಪಿರ್ಯಾದಿದಾರರ ಹೆಂಡತಿಗೆ ಕೇಳಿಸಿದ್ದು, ಮನೆಗೆ ಹೋಗಿ ನೋಡಿದಾಗ ಸತೀಶನು ಮನೆಯ ಆವರಣದಲ್ಲಿದ್ದ ಫ್ಯಾನಿಗೆ ಸೀರೆಯ ಒಂದು ಬದಿಯನ್ನು ಬಿಗಿದು ಇನ್ನೊಂದು ಬದಿಯನ್ನು ತನ್ನ ಕೊರಳಿಗೆ ನೇಣಾಗಿ ಕುಣಿಕೆ ಮಾಡಿಕೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ವಿಚಾರವನ್ನು ಪಿರ್ಯಾದಿದಾರರಿಗೆ ಅವರ ಹೆಂಡತಿಯು ಫೋನಿನಲ್ಲಿ ಕರೆ ಮಾಡಿ ಸಂಜೆ 4:15 ಗಂಟೆಗೆ ತಿಳಿಸಿದ್ದು, ಪಿರ್ಯಾದಿದಾರರು ಮನೆಗೆ ಬಂದು ಸತೀಶ್ ರವರನ್ನು ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಆತನನ್ನು ಪರೀಕ್ಷಿಸಿದ ವೈದ್ಯಾಧಿಕಾರಿಗಳು ಅದಾಗಲೆ ದಾರಿ ಮಧ್ಯದಲ್ಲಿಯೇ ಮೃತಪಟ್ಟಿರುವುದಾಗಿ ಸಂಜೆ 4:40 ಗಂಟೆಗೆ ತಿಳಿಸಿದ್ದು, ಮೃತರು ಮದ್ಯಪಾನ ವ್ಯಸನಿಯಾಗಿದ್ದು, ಮಧ್ಯಪಾನ ಸೇವನೆ ಮಾಡಿ ಮಾನಸಿಕ ಖಿನ್ನತೆಗೊಳಪಟ್ಟು ಅಥವಾ ಇನ್ನಾವುದೋ ಕಾರಣದಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿದೆ.
ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 69/2025 ಕಲಂ: 194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.
ಇತರ ಪ್ರಕರಣ