Home Latest ಮಳೆಗಾಲದ ನೆರೆ ತಡೆಗೆ ಮೂಡು ತೋಡಿನಲ್ಲಿ ಹೂಳು ತೆರವು : ಶಾಸಕ ಯಶ್  ಪಾಲ್  ಸುವರ್ಣ...

ಮಳೆಗಾಲದ ನೆರೆ ತಡೆಗೆ ಮೂಡು ತೋಡಿನಲ್ಲಿ ಹೂಳು ತೆರವು : ಶಾಸಕ ಯಶ್  ಪಾಲ್  ಸುವರ್ಣ ಪರಿಶೀಲನೆ

ಉಡುಪಿ : ಕಡೆಕಾರ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಕನ್ನರ್ಪಾಡಿ, ಕುತ್ಪಾಡಿ ಹಾಗೂ ಕಡೆಕಾರ್ ಭಾಗದ ಮೂಡು ತೋಡಿನಲ್ಲಿ ಹೂಳು ತುಂಬಿ ನೀರು ಹರಿಯಲು ಅಡಚಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಮಳೆಗಾಲದಲ್ಲಿ ಕೃತಕ ನೆರೆ ಸಮಸ್ಯೆ ತಲೆದೋರಿದೆ.

ಈ ಬಗ್ಗೆ ಸಾರ್ವಜನಿಕರಿಂದ ಬಂದ ಮನವಿಗೆ ಸ್ಪಂದಿಸಿದ ಶಾಸಕರ ಸೂಚನೆಯ ಮೇರೆಗೆ ಸಣ್ಣ ನೀರಾವರಿ ಇಲಾಖೆಯಿಂದ ತೋಡಿನ ಹೂಳು ತೆರವು ಕಾಮಗಾರಿ ಪ್ರಾರಂಭಿಸಲಾಗಿದೆ.

ಈ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಉಡುಪಿ ಶಾಸಕ Yashpal Suvarna ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಮಗಾರಿ ಸಮರ್ಪಕವಾಗಿ ಮತ್ತು ಶೀಘ್ರ ಪೂರ್ಣಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಅಶೋಕ್ ಪಾಲನ್, ಜಯಕರ್ ಸನಿಲ್, ಪ್ರಶಾಂತ್ ಸಾಲ್ಯಾನ್, ಪ್ರದೀಪ್ ಚಂದ್ರ, ಅಶೋಕ್ ಭಂಡಾರಿ, ರಾಕೇಶ್ ಜತ್ತನ್, ಅಶೋಕ್ ಸುವರ್ಣ, ಕಿಶೋರ್ ಕುಮಾರ್, ಕಿರಣ್ ಸುವರ್ಣ, ಕುಶಾಲ್ ಶೆಟ್ಟಿ, ಅರುಣ್ ಕಡೆಕಾರ್, ದೀಪಕ್ ಪುತ್ರನ್, ದಾಮೋದರ್ ಶೇರಿಗಾರ್, ಭಾಸ್ಕರ್ ಶೇರಿಗಾರ್, ಸೂರ್ಯಕಾಂತ್, ಮಧುಕರ್, ರಾಜೇಶ್ ನಾಯರ್, ದಯಾನಂದ ಸೇರಿದಂತೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸಿದ್ದೇಶ್ ಹಾಗೂ ಇತರರು ಉಪಸ್ಥಿತರಿದ್ದರು.