Home Dskshina Kannada ಅಕ್ರಮ ಗೋ ಸಾಗಾಟ ಪತ್ತೆ : 8 ಜಾನುವಾರು ರಕ್ಷಣೆ…!!

ಅಕ್ರಮ ಗೋ ಸಾಗಾಟ ಪತ್ತೆ : 8 ಜಾನುವಾರು ರಕ್ಷಣೆ…!!

ಸಾಂದರ್ಭಿಕ ಚಿತ್ರ

ಮೂಡಬಿದಿರೆ : ತೋಡಾರು ಗ್ರಾಮದ ಪ್ರವೇಶ ದ್ವಾರದ ಬಳಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಸಾಗಾಟವಾಗುತ್ತಿದ್ದ 8 ಜಾನುವಾರುಗಳನ್ನು ರಕ್ಷಿಸಿ, ಎರಡು ವಾಹನಗಳನ್ನು ಭಾನುವಾರ ವಶಕ್ಕೆ ಪಡೆದಿದ್ದಾರೆ.

ಗರಡಿ ಕಡೆಯಿಂದ ಬರುತ್ತಿದ್ದ ವ್ಯಾಗನರ್ ಕಾರು ಹಾಗೂ ಅದರ ಹಿಂದೆಯೇ ಬಂದ ಪಿಕಪ್ ವಾಹನವನ್ನು ನಿಲ್ಲಿಸಲು ಸೂಚಿಸಲಾಯಿತು. ಆದರೆ ವಾಹನ ಸವಾರರು ಸೂಚನೆ ಲೆಕ್ಕಿಸದೆ ವೇಗವಾಗಿ ಮುಂದಕ್ಕೆ ಚಲಿಸಿದ್ದು, ಅನುಮಾನಗೊಂಡ ಪೊಲೀಸರು ವಾಹನಗಳನ್ನು ಬೆನ್ನಟ್ಟಿ ಹೋಗಿ ಅಡ್ಡಗಟ್ಟಿದರು. ಪಿಕಪ್ ವಾಹನದ ಚಾಲಕ ಹರ್ಷದ್ ಹಾಗೂ ಇತರರು ಸ್ಥಳದಿಂದ ಓಡಿ ಪರಾರಿಯಾದರೆ, ಪಿಕಪ್‌ಗೆ ಬೆಂಗಾವಲಾಗಿ ಬಂದಿದ್ದ ವ್ಯಾಗನರ್ ಕಾರಿನ ಚಾಲಕ ಸಫರ್ ಮತ್ತು ಹಂಡೇಲು ನಿವಾಸಿ ಅಬೂಬಕರ್ ಕೂಡ ಪರಾರಿಯಾಗಿದ್ದಾರೆ.

ಪಿಕಪ್ ವಾಹನವನ್ನು ಪರಿಶೀಲಿಸಿದ ವೇಳೆ ಎರಡು ಹಸುಗಳು, ಎರಡು ಗಂಡು ದನಗಳು ಹಾಗೂ ನಾಲ್ಕು ಗಂಡು ಕರುಗಳನ್ನು ಹಿಂಸಾತ್ಮಕವಾಗಿ ಕಾಲು ಹಾಗೂ ತಲೆಯನ್ನು ಹಗ್ಗಗಳಿಂದ ಕಟ್ಟಿ ಸಾಗಿಸುತ್ತಿರುವುದು ಪತ್ತೆಯಾಯಿತು.

ಎಸ್‌ಐ ಪ್ರತಿಭಾ ಕೆ.ಸಿ. ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದ್ದು, ಮೂಡುಬಿದಿರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಾಂದರ್ಭಿಕ ಚಿತ್ರ