ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಸಮೀಪ ಮೋಟಾರು ಸೈಕಲ್ ರಸ್ತೆಯ ಬದಿ ಡಿವೈಡರ್ ಗೆ ಢಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟ ಯುವಕ ಅರುಣ್ ಎಂದು ತಿಳಿಯಲಾಗಿದೆ.
ಈ ಘಟನೆಗೆ ಸಂಬಂಧಿಸಿದಂತೆ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ವಿವರ: ದಿನಾಂಕ 10/04/2026 ರಂದು 11:00 ಗಂಟೆಗೆ ರಾಷ್ಟ್ರೀಯ.ಹೆದ್ದಾರಿ 66 ನೇ ಉಡುಪಿ- ಬೈಂದೂರು ಏಕಮುಕ ರಸ್ತೆಯಲ್ಲಿ ಮೋಟಾರ್ ಸೈಕಲ್ ನಂಬ್ರ KA-19-HJ-7516 ನೇದನ್ನು ಅದರ ಚಾಲಕ ಅರುಣ್ (17 ) ಎಂಬಾತನು ಅತೀ ವೇಗ ಮತ್ತು ಅಜಾಗರುಕತೆಯಿಂದ ಚಾಲನೆ ಮಾಡಿಕೊಂಡು ಬಂದು ಕುಂದಾಪುರ ಶಾಸ್ತ್ರೀಪಾರ್ಕ್ ಫ್ಲೈಒವರ್ ಕೊನೆಗೊಳ್ಳುವಲ್ಲಿ ತಲುಪುವಾಗ ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ರಸ್ತೆಯ ಬದಿ ಡಿವೈಡರ್ಗಳಿಗೆ ಹಾಗೂ ಕಬ್ಬಿಣದ ಗ್ರಿಲ್ಸ್ ಗಳಿಗೆ ಡಿಕ್ಕಿ ಹೊಡೆದು ಮೋಟರ್ ಸೈಕಲ್ ಸವಾರ ಮೋಟಾರ್ ಸೈಕಲ್ ನೊಂದಿಗೆ ಸ್ಕಿಡ್ ಆಗಿ ಬಿದ್ದಿದ್ದು ಪರಿಣಾಮ ತಲೆಗೆ ಹಾಗೂ ಕೈಕಾಲುಗಳಿಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು ಮಾತನಾಡು ಸ್ಥಿತಿಯಲ್ಲಿ ಇಲ್ಲದೇ ಇದ್ದವರನ್ನು ಅಲ್ಲಿಯೇ ಘಟನಾ ಸ್ಥಳದಲ್ಲಿ ಇದ್ದ ರಾಘವೇಂದ್ರ ಖಾರ್ವಿ ಎಂಬುವವರು ತಮ್ಮ ರಿಕ್ಷಾದಲ್ಲಿ ಚಿಕಿತ್ಸೆ ಬಗ್ಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ನಂತರ ಆಸ್ಪತ್ರೆಗೆ ಬಂದ ಪಿರ್ಯಾದಿದಾರರಾದ ಕೌಶಿಕ್ ( 28), ಸಾಸ್ತಾನ ಬ್ರಹ್ಮಾವರ ಇವರು ಗಾಯಗೊಂಡವರನ್ನು ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ KMC ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆ ಅಜ್ಜರಕಾಡು ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿದ್ದು ವೈದ್ಯರು ಪರೀಕ್ಷಿಸಿ ದಿನಾಂಕ 11/04/2026 ರಂದು ಮುಂಜಾವಿನ 01:30 ಗಂಟೆಗೆ ಮೃತ ಪಟ್ಟಿರುವುದಾಗಿ ದೃಢಪಡಿಸಿರುತ್ತಾರೆ.
ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 36/2026 ಕಲಂ 281, 106(1) BNS ರಂತೆ ಪ್ರಕರಣ ದಾಖಲಾಗಿರುತ್ತದೆ..





