Home Crime ಉಡುಪಿ: ಯುವಕ ನಾಪತ್ತೆ…!!

ಉಡುಪಿ: ಯುವಕ ನಾಪತ್ತೆ…!!

ಕುಂದಾಪುರ : ಉಡುಪಿ ಜಿಲ್ಲೆಯ ಶಂಕರನಾರಾಯಣ ಸಮೀಪ ಹೊಟೇಲ್ ಒಂದರಲ್ಲಿ ಉದ್ಯೋಗ ಮಾಡಿಕೊಂಡಿದ್ದ ಕುಂದಾಪುರ ತಾಲೂಕಿನ ಯಡಮೊಗ್ಗೆ ಗ್ರಾಮದ ಬೀರನಬೈಲು ನಿವಾಸಿ ಪ್ರಶಾಂತ (23) ಎಂಬ ವ್ಯಕ್ತಿಯು 2024 ರ ಮಾರ್ಚ್ 1 ರಂದು ಕೆಲಸಕ್ಕೆಂದು ಹೋದವರು ಮನೆಗೆ ವಾವಾಸು ಬಾರದೆ ನಾಪತ್ತೆಯಾಗಿರುತ್ತಾರೆ.

5 ಅಡಿ 4 ಇಂಚು ಎತ್ತರ, ಎಣ್ಣೆ ಕಪ್ಪು ಮೈಬಣ್ಣ, ಸಾಧಾರಣ ಶರೀರ ಹೊಂದಿದ್ದು ಕನ್ನಡ ಭಾಷೆ ಮಾತನಾಡುತ್ತಾರೆ.

ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಶಂಕರನಾರಾಯಣ ಪೊಲೀಸ್ ಠಾಣೆ ದೂ.ಸಂ: 08259-280299, ಕುಂದಾಪುರ ಠಾಣೆ ದೂ.ಸಂ: 08254-230338, ಎಸ್.ಡಿ.ಪಿ.ಒ: 08254-232338, ಡಿ.ಪಿ.ಒ: 0820-2534777, ರೇಂಜ್: 8242220501 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಶಂಕರನಾರಾಯಣ ಪೊಲೀಸ್ ಠಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.