ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಅಕ್ರಮ ದನಗಳ ಸಾಗಾಟ ಪ್ರಕರಣದ ನಾಲ್ಕು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಪ್ರಕರಣ ವಿವರ: ದಿನಾಂಕ:28.07.2025 ಸಂಜೆ ಸುಮಾರು 19-00 ಗಂಟೆಗೆ ಕಾಳಾವರ ಜಂಕ್ಷನ್ ನಲ್ಲಿರುವ ಅಭಿಮಾನ ಬಾರ್ ಬಳಿಯ ನಂದಿಕೇಶ್ವರ ಬೇಕರಿಯ ಸಿಸಿ ಟಿವಿ ಕ್ಯಾಮಾರಾವನ್ನು ಪರಿಶೀಲಿಸಿದಲ್ಲಿ 2 ದನಗಳು ಬೇಕರಿಯ ಪಕ್ಕದಲ್ಲಿ ಮಲಗಿದ್ದು, ದಿನಾಂಕ: 28.07.2025 ರಂದು ಬೆಳಿಗ್ಗೆ 05-00 ಗಂಟೆ ಸುಮಾರಿಗೆ ಆ ದನಗಳಲ್ಲಿ 1 ದನವನ್ನು ಯಾರೋ 2 ಜನರು ಯಾವುದೋ ಆಹಾರವನ್ನು ದನಕ್ಕೆ ನೀಡಿ ದನದ ಕೊಂಬನ್ನು ಹಿಡಿದು ಗಟ್ಟಿಯಾಗಿ ಎಳೆದು ದನದ ಕೈ ಕಾಲುಗಳನ್ನು ಕಟ್ಟಿ ಹಾಕುತ್ತಿರುವುದು ಕಂಡು ಬಂತು. ದನವನ್ನು 2 ಜನ ಆರೋಪಿಗಳು ವಧೇ ಮಾಡುವ ಉದ್ದೇಶದಿಂದ ಯಾವುದೋ ವಾಹನದಲ್ಲಿ ದನವನ್ನು ಹಿಂಸಾತ್ಮಕ ರೀತಿಯಲ್ಲಿ ಕಳವು ಮಾಡಿಕೊಂಡು ಹೋಗಿದ್ದಾಗಿದೆ. ಕಳವು ಮಾಡಿದ ದನವು ಕಂದು ಬಣ್ಣದ ದನವಾಗಿದ್ದು, ಅದರ ಅಂದಾಜು ಮೌಲ್ಯ ಸುಮಾರು 5000/- ಆಗಿರುತ್ತದೆ ಎಂಬುದಾಗಿ ನೀಡಿದ ದೂರಿನಂತೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 45/2025 U/S : 303(2) BNS & 4,5,12 The Karnataka Prevention Of Slaughter and Prevention Of Cattle Ordinance Act-2020, U/s 11(1)(D) Prevention of cruelty to animals Act-1960 ರಂತೆ ಪ್ರಕರಣ ದಾಖಲಾಗಿರುತ್ತದೆ.
ಶ್ರೀ ಹರಿರಾಮ್ ಶಂಕರ್, ಐ.ಪಿ.ಎಸ್. ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ,ಉಡುಪಿ. ಶ್ರೀ ಸುಧಾಕರ್ ನಾಯಕ್ ಹೆಚ್ಚುವರಿ ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆ ರವರ ನಿರ್ದೇಶನದಂತೆ ಶ್ರೀ ಹೆಚ್.ಡಿ ಕುಲಕರ್ಣಿ, ಪೊಲೀಸ್ ಉಪಾಧೀಕ್ಷಕರು, ಕುಂದಾಪುರ ಉಪ ವಿಭಾಗ, ಕುಂದಾಪುರ ಹಾಗೂ ಶ್ರೀ ಜಯರಾಮ್ ಡಿ. ಗೌಡ ಪೊಲೀಸ್ ವೃತ್ತ ನಿರೀಕ್ಷಕರು, ಕುಂದಾಪುರ ವೃತ್ತರವರ ಮಾರ್ಗದರ್ಶನದಲ್ಲಿ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಭೀಮಾಶಂಕರ ಸಿನ್ನೂರ, ಕುಂದಾಪುರ ಸಂಚಾರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರು ನೂತನ್.ಡಿ.ಈ, ಶಂಕರನಾರಾಯಣ ಪೊಲೀಸ್ ಠಾಣಾ ಉಪನಿರೀಕ್ಷಕರಾದ ಶಂಭುಲಿಂಗಯ್ಯ ಹಾಗೂ ಸಿಬ್ಬಂದಿಯವರಾದ ರಾಜು ಬಿ, ಸಂತೋಷ್, ಶ್ಯಾಮ, ಕಿಶನ್ ಗೌಡ, ಶ್ರೀಧರ್ ಪಾಟೀಲ್,ಕಿರಣ್ ಬಿ ಪಾಟೀಲ್, ಮೌನೇಶ್,ಲೋಹಿತ್ ರವರು ಪ್ರಕರಣದಲ್ಲಿ ಭಾಗಿಯಾಗಿದ್ದರು.
ಆರೋಪಿತರಾದ 1) ಅಬೂಬಕರ್(39), ತಂದೆ: ಅಬ್ದುಲ್ ಬ್ಯಾರಿ, ವಾಸ: ತೋಟದ ಮನೆ ಗುಲ್ವಾಡಿ ಗ್ರಾಮ, ಕುಂದಾಪುರ ತಾಲೂಕು. 2) ಮಹಮ್ಮದ್ ರಫೀಕ್(36)ತಂದೆ: ಜಿ.ಹೆಚ್. ನಜೀರ್, ದಾಸರಬೆಟ್ಟು, ಗುಲ್ವಾಡಿ ಗ್ರಾಮ, ಕುಂದಾಪುರ 3) ಯಾಕೂಬಾ(24), ತಂದೆ: ಹಂಝಾ,ವಾಸ: ತೋಟದ ಮನೆ, ಗುಲ್ವಾಡಿ ಗ್ರಾಮ, ಕುಂದಾಪುರ 4)ಸುನಿಲ್ (33), ತಂದೆ: ಅಬ್ದುಲ್, ವಾಸ: ಕೋಟೆ ಬಾಗಿಲು, ತಲ್ಲೂರು ಗ್ರಾಮ, ಕುಂದಾಪುರ ತಾಲೂಕು.ರವರನ್ನು ದಿನಾಂಕ 01.08.2025 ರಂದು ವಶಕ್ಕೆ ಪಡೆದು ಮತ್ತು ಕೃತ್ಯಕ್ಕೆ ಬಳಸಿದ್ದ KA35C4317ನೇ BOLERO MAXI TRUCK PLUSನೇ ಗೂಡ್ಸ್ ವಾಹನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದ. ಇದರ ಅಂದಾಜು ಮೌಲ್ಯ ಸುಮಾರು 5,00,000/- ರೂಪಾಯಿ ಆಗಿರುತ್ತದೆ.
ಆರೋಪಿತರನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.




