Home Art & Culture ಸಿನಿ ಪ್ರೇಕ್ಷಕರ ಮನಸ್ಸು ಗೆದ್ದ ಚಿತ್ರ “ಸು ಫ್ರಮ್ ಸೋ”…!!

ಸಿನಿ ಪ್ರೇಕ್ಷಕರ ಮನಸ್ಸು ಗೆದ್ದ ಚಿತ್ರ “ಸು ಫ್ರಮ್ ಸೋ”…!!

ಬೆಂಗಳೂರು : “ಸು ಫ್ರಮ್ ಸೋ” ಚಿತ್ರವು ತನ್ನ ಬಿಡುಗಡೆಯ ಏಳು ದಿನಗಳಲ್ಲಿಯೇ ವಿಶ್ವದಾದ್ಯಂತ 21 ಕೋಟಿ ರೂಪಾಯಿಗೂ ಹೆಚ್ಚು ಗಳಿಕೆ ಮಾಡಿದೆ. ಯಾವುದೇ ದೊಡ್ಡ ನಟರನ್ನು ಒಳಗೊಂಡಿಲ್ಲದ ಈ ಚಿತ್ರದ ಯಶಸ್ಸು ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ತುಂಬಿದೆ.ವಾರದ ದಿನಗಳಲ್ಲೂ ಚಿತ್ರವು ದೊಡ್ಡ ಮಟ್ಟದಲ್ಲಿ ಗಳಿಕೆ ಮಾಡುತ್ತಿದೆ ಎಂದು ಮಾಹಿತಿ ತಿಳಿದು ಬಂದಿದೆ.

‘ಸು ಫ್ರಮ್ ಸೋ’ ಸಿನಿಮಾ (Su From So) ವಾರದ ಮಧ್ಯದಲ್ಲಿ ಅಂದರೆ ಬುಧವಾರ (ಜುಲೈ 30) ಬಂಗಾರದ ಬೆಳೆ ತೆಗೆದಿದೆ. ಈ ಸಿನಿಮಾ ಮಾಡುತ್ತಿರುವ ಕಲೆಕ್ಷನ್ಗೆ ಹಲವು ದಾಖಲೆಗಳು ಉಡೀಸ್ ಆಗಿವೆ. ಈ ಚಿತ್ರ ಕನ್ನಡ ಚಿತ್ರರಂಗಕ್ಕೆ ಹೊಸ ಚೈತನ್ಯ ಕೊಟ್ಟಿದೆ. ಇನ್ನೂ ಕೆಲವು ದಿನ ಕಲೆಕ್ಷನ್ ಹೀಗೆಯೇ ಮುಂದುವರೆಯುವ ಸಾಧ್ಯತೆ ಇದೆ. ಈ ಚಿತ್ರದ ಗೆಲುವಿನಿಂದ ತಂಡದವರ ಮೊಗದಲ್ಲಿ ನಗು ಮೂಡಿದೆ.

‘ಸು ಫ್ರಮ್ ಸೋ’ ಸಿನಿಮಾ ಜುಲೈ 25ರಂದು ರಿಲೀಸ್ ಆಯಿತು. ಚಿತ್ರದ ಏಳು ದಿನಗಳ ಕಲೆಕ್ಷನ್ ಲೆಕ್ಕ ಸಿಕ್ಕಿದೆ. ವಿಶ್ವ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ 21 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಭಾರತದಲ್ಲಿ ಚಿತ್ರ ಸುಮಾರು 16.20 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಇನ್ನು ಬುಧವಾರ ಕೂಡ ಸಿನಿಮಾ 3.50 ಕೋಟಿ ಬಾಚಿಕೊಂಡಿದೆ ಎಂಬುದು ವಿಶೇಷ.

ಶನಿವಾರ ಹಾಗೂ ಭಾನುವಾರ ಭರ್ಜರಿ ಗಳಿಕೆ ಮಾಡುವ ಸಿನಿಮಾಗಳು ವಾರದ ದಿನಗಳಲ್ಲಿ ಮಂಕಾಗುತ್ತವೆ. ಇದು ದೊಡ್ಡ ಬಜೆಟ್ ಸಿನಿಮಾಗಳಿಗೂ ಅನ್ವಯ ಆಗುತ್ತದೆ. ಹಲವು ಚಿತ್ರಗಳಿಗೆ ಈ ರೀತಿ ಆಗಿದ್ದು ಇದೆ. ಆದರೆ, ‘ಸು ಫ್ರಮ್ ಸೋ’ ವಿಚಾರದಲ್ಲಿ ಮಾತ್ರ ಅದು ಉಲ್ಟಾ ಆಗಿದೆ. ಭಾನುವಾರದಿಂದ ಆರಂಭ ಆಗಿ ಬುಧವಾರದವರೆಗೆ ಸಿನಿಮಾದ ಸರಾಸರಿ ಮೂರರಿಂದ ಮೂರುವರೆ ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಅನ್ನೋದು ವಿಶೇಷ.

ಈ ಚಿತ್ರ ಕನ್ನಡ ಸಿನಿಮಾ ಪ್ರೇಕ್ಷಕರ ಮನಸ್ಸು ಗೆದ್ದಿದೆ. ಚಿತ್ರವು ಅತ್ಯುತ್ತಮವಾಗಿ ಮೂಡಿ ಬಂದಿದೆ. ಹಾಸ್ಯ ಭರಿತ ಚಿತ್ರ “ಸು ಫ್ರಮ್ ಸೋ”….