Home Kundapura News ಉಡುಪಿ: ಯುದ್ಧ- ಹಿಂಸೆ ವಿರುದ್ಧ ಏಕಾಂಗಿ ಪ್ರತಿಭಟನೆಗಿಳಿದ ಕಲಾವಿದ ಉಪನ್ಯಾಸಕ ರಾಮಾಂಜಿ…!!

ಉಡುಪಿ: ಯುದ್ಧ- ಹಿಂಸೆ ವಿರುದ್ಧ ಏಕಾಂಗಿ ಪ್ರತಿಭಟನೆಗಿಳಿದ ಕಲಾವಿದ ಉಪನ್ಯಾಸಕ ರಾಮಾಂಜಿ…!!

ಉಡುಪಿ: ಕುಂದಾಪುರದ ಅಂತಾರಾಷ್ಟ್ರೀಯ ದುಡಿಯುವ ಮಕ್ಕಳ ಸಂಸ್ಥೆಯಾದ ‘ನಮ್ಮ ಭೂಮಿ’ಯ ರಾಯಭಾರಿ , ಮಕ್ಕಳ ಹಕ್ಕುಗಳ ಹೋರಾಟಗಾರ, ರಂಗಭೂಮಿ ಕಲಾವಿದ ಹಾಗೂ ಕನ್ನಡ ಉಪನ್ಯಾಸಕ ರಾಮಾಂಜಿ ಅವರು ಏಕಾಂಗಿ ಹೋರಾಟಕ್ಕೆ ಇಳಿದಿದ್ದಾರೆ.

ಮಧ್ಯ ಏಶ್ಯಾದಲ್ಲಿ ನಡೆಯುತ್ತಿರುವ ಯುದ್ಧ ಮತ್ತು ನರಹತ್ಯೆ ವಿರುದ್ಧ ತಮ್ಮದು ಸಾಂಕೇತಿಕ ಹೋರಾಟ ಎಂದವರು ಹೇಳಿಕೊಂಡಿದ್ದಾರೆ.

ಇಂದು ಬೆಳಿಗ್ಗೆ ಉಡುಪಿಯ ಕ್ಲಾಕ್ ಟವರ್ ಸಮೀಪದ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅವರು ತಮ್ಮ ಸಾಂಕೇತಿಕ ಪ್ರತಿಭಟನೆ ಆರಂಭಿಸಿದರು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅವರು , ವಿಶ್ವದ ಓರ್ವ ಸಂವೇದನಾಶೀಲ ಪ್ರಜೆಯಾಗಿ, ಕಳೆದ ಒಂದು ತಿಂಗಳಿನಿಂದ ನಡೆಯುತ್ತಾ ಬಂದಿರುವ ಯುದ್ಧ ಸಂಬಂಧಿ ಘಟನೆಗಳನ್ನು ನೋಡಿ ಮನನೊಂದಿದ್ದೇನೆ.

ಮಾನವ ಜನಾಂಗದ ಮೇಲೆ ನಡೆಯುತ್ತಿರುವ ಹಿಂಸೆಗಳಿಗೆ ಮತ್ತು ಪ್ರಕೃತಿಯ ಮೇಲೆ ಆಗುತ್ತಿರುವ ದಬ್ಬಾಳಿಕೆಗೆ ನೈತಿಕ ಪ್ರತಿಭಟನೆ ಮಾಡುತ್ತಿದ್ದೇನೆ. ಯಾರದೋ ಲಾಭಕ್ಕಾಗಿ ಯಾರದೋ ಸಂಪತ್ತಿನ ಲೂಟಿಗಾಗಿ ನಡೆಯುತ್ತಿರುವ ಮಾರಣಹೋಮ ಖಂಡನೀಯ. ಗಾಂಧಿ ಮಾದರಿಯಲ್ಲಿ ಶಾಂತಿಯುತ ಧರಣಿಯನ್ನು ಹಮ್ಮಿಕೊಂಡಿದ್ದೇನೆ.

ನನ್ನ ಈ ಪ್ರತಿಭಟನೆಯನ್ನು ರಾಜ್ಯವ್ಯಾಪಿ ವಿಸ್ತರಿಸುವ ಯೋಚನೆ ಇದೆ ಎಂದು ಹೇಳಿದರು.