Home Crime ಹೆಬ್ರಿ : ನೀರಿನ ಟ್ಯಾಂಕ್‌ನಲ್ಲಿ ಬಿದ್ದು ವ್ಯಕ್ತಿ ಮೃತ್ಯು..!

ಹೆಬ್ರಿ : ನೀರಿನ ಟ್ಯಾಂಕ್‌ನಲ್ಲಿ ಬಿದ್ದು ವ್ಯಕ್ತಿ ಮೃತ್ಯು..!

ಹೆಬ್ರಿ: ಇಲ್ಲಿನ ಇಂದಿರಾನಗರದಲ್ಲಿ ದುರ್ಘಟನೆಯೊಂದು ಸಂಭವಿಸಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.

ಜಯಂತಿ ನಾಯ್ಕ (47) ಅವರ ಗಂಡ ಶೇಖರ ನಾಯ್ಕ್‌ (57) ಅವರು ಕೂಲಿ ಕೆಲಸ ಮಾಡುತ್ತಿದ್ದರು. ದಿನಾಂಕ 07/04/2026 ರಂದು ತಮ್ಮ ಮನೆಯಲ್ಲಿ ಮೇಲಿನ ನೀರಿನ ಟ್ಯಾಂಕ್‌ನಲ್ಲಿ ನೀರು ಇರುವುದನ್ನು ಪರಿಶೀಲಿಸಲು ಹೋದಾಗ, ಅವರ ಮೊಬೈಲ್ ಫೋನ್ ಟ್ಯಾಂಕ್ ಒಳಗೆ ಬಿದ್ದಿದೆ. ಅದನ್ನು ತೆಗೆದುಕೊಳ್ಳಲು ಬಾಗಿ ನೋಡಿದ ವೇಳೆ ಅವರು ಸಮತೋಲನ ಕಳೆದುಕೊಂಡು ನೀರಿನ ಟ್ಯಾಂಕ್ ಒಳಗೆ ಬಿದ್ದಿದ್ದಾರೆ.

ನೀರಿನಲ್ಲಿ ಮುಳುಗಿ ಮೇಲಕ್ಕೆ ಬರಲಾಗದೆ ಅಸಹಾಯಕರಾಗಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಪರೀಕ್ಷಿಸಿ ಸಂಜೆ ಸುಮಾರು 7:30 ಗಂಟೆಗೆ ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.