ಕಾರ್ಕಳ: ಉಡುಪಿ ಜಿಲ್ಲೆಯ ಕಾರ್ಕಳ ಸಮೀಪ ವ್ಯಕ್ತಿಯೊಬ್ಬರು ಮನೆಯಿಂದ ಹೋದವರು ಬಾರದೇ ನಾಪತ್ತೆಯಾದ ಘಟನೆ ನಡೆದಿದೆ.
ನಾಪತ್ತೆಯಾದ ವ್ಯಕ್ತಿ ಮುಂಡ್ಕೂರು ಮುಲ್ಲಡ್ಕ ನಿವಾಸಿ ತಾರನಾಥ ಎಂದು ತಿಳಿದು ಬಂದಿದೆ.
ಕಾರ್ಕಳ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ಪ್ರಕರಣ ವಿವರ : ಪಿರ್ಯಾದಿದಾರರಾಧ ಶ್ರೀಮತಿ ಸುಕನ್ಯ (52) ಮುಂಡ್ಕೂರು ಅಂಚೆ, ಮುಲ್ಲಡ್ಕ ಗ್ರಾಮ ಕಾರ್ಕಳ ತಾಲೂಕು, ಇವರ ಗಂಡ ತಾರನಾಥ ವಿ (52) ಎಂಬವರು ಕಳೆದ 4 ವರ್ಷಗಳಿಂದ ಪಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದು ಕಳೆದ ಎರಡು ವರ್ಷಗಳಿಂದ ನೆನಪಿನ ಶಕ್ತಿ ಇಲ್ಲದೇ ಇದ್ದು, ತಾನು ಎಲ್ಲಿಗೆ ಹೋಗುತ್ತೇನೆಂದು ತಿಳಿಯದೆ ದಿನಾಂಕ 25/07/2025 ರಂದು ರಾತ್ರಿ 10:00 ಗಂಟೆಯಿಂದ ದಿನಾಂಕ 26/07/2025 ರಂದು ಬೆಳಿಗ್ಗೆ 6:00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯಲ್ಲಿ ಮಲಗಿದವರು ಎದ್ದು ಹೊರಗಡೆ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿರುವುದಾಗಿದೆ.
ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 91/2025 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.