Home Karavali Karnataka ಲಾರಿ ಹಾಗೂ ಬೈಕ್ ನಡುವೆ ಅಪಘಾತ : ಸವಾರ ಮೃತ್ಯು…!!

ಲಾರಿ ಹಾಗೂ ಬೈಕ್ ನಡುವೆ ಅಪಘಾತ : ಸವಾರ ಮೃತ್ಯು…!!

ಕೊಲ್ಲೂರು: ಉಡುಪಿ ಜಿಲ್ಲೆಯ ಕೊಲ್ಲೂರು ಸಮೀಪ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆ ಕುಂದಾಪುರ ತಾಲೂಕಿನ, ಕೆರಾಡಿ ಗ್ರಾಮದ ಚಪ್ಪರಕ ಕೋಣ್‌ಬೇರು ಎಂಬಲ್ಲಿ ನಡೆದಿದೆ.

ಮೃತಪಟ್ಟ ಬೈಕ್ ಸವಾರ ರೋಧಿ ಲಾಲ್‌ ಎಂದು ತಿಳಿಯಲಾಗಿದೆ.

ಬೈಕ್ ಸವಾರ ಕೆರಾಡಿ ಕಡೆಯಿಂದ ಕಾರಿಬೈಲು ಕಡೆಯಿಂದ ಕೆರಾಡಿ ಕಡೆಗೆ ಗುಂಡು ಎಂಬವರು ಚಲಾಯಿಸಿಕೊಂಡು ಲಾರಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದು ರಸ್ತೆಯಲ್ಲಿ ಬೈಕ್‌ ಸಹಿತ ಬಿದ್ದಿದ್ದು ಲಾರಿಯ ಚಕ್ರ ಬೈಕ್‌ ಚಾಲಕ ರೋಧಿ ಲಾಲ್‌ ತಲೆಯ ಮೇಲೆ ಹತ್ತಿದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಅಪಘಾತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.