ಬಂಟ್ವಾಳ: SKSSF ಕಾರ್ಯಕರ್ತ ಹಾಗೂ ಆಂಬುಲೆನ್ಸ್ ಚಾಲಕರೊಬ್ಬರು ಶರವೇಗದಲ್ಲಿ ಮಗುವಿನ ಜೀವ ಉಳಿಸಿರುವ ಅಪರೂಪದ ಘಟನೆ ತಡರಾತ್ರಿ ನಡೆದಿದೆ.
ಒಂದೂವರೆ ವರ್ಷದ ಮಗು ಉಸಿರಾಟದ ತೊಂದರೆ ಬಳಲುತ್ತಿದ್ದು, ಸೋಮವಾರ ರಾತ್ರಿ ಜೋರಾಗಿತ್ತು. ಕುಟುಂಬದವರು ತಕ್ಷಣ ತುಂಬೆಯ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದು ಕೊಂಡು ಹೋಗಿದ್ದಾರೆ. ಅಲ್ಲಿಯ ವೈದ್ಯರು ಮಗುವ ಸ್ಥಿತಿ ನೋಡಿ ಹೆಚ್ಚಿನ ಚಿಕಿತ್ಸೆಗೆ ತಕ್ಷಣ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಹೇಳುತ್ತಾರೆ. ಕಂಗಾಲಾಗಿದ್ದ ಕುಟುಂಬ ತಕ್ಷಣ ಇಮ್ರಾನ್ ರವರಿಗೆ ತಡ ರಾತ್ರಿ ಕರೆ ಮಾಡಿ ವಿಷಯವನ್ನು ತಿಳಿಸಿದರು.
ವಿಷಯ ತಿಳಿದ ಕ್ಷಣದಲ್ಲೇ ಆಸ್ಪತ್ರೆಗೆ ಧಾವಿಸಿ ಮಗುವನ್ನು ಕೇವಲ ಐದು ನಿಮಿಷದಲ್ಲಿ ತುಂಬೆಯಿಂದ ಮಂಗಳೂರಿನ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಸಾಗಿಸಿ ಮಗುವಿಗೆ ಆಸರೆಯಾಗಿದ್ದಾರೆ. ಮಗುವಿನ ಪ್ರಾಣಾಪಾಯಕ್ಕೆ ಯಾವುದೇ ತೊಂದರೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ.
ಆರೋಗ್ಯದ ವಿಚಾರ ಸಂಭವಿಸಿದಾಗ ನನಗೇಕೆ ಉಸಾಬರಿ ಎಂದು ಕಂಡೂಕಾಣದಂತೆ ದೂರ ಸರಿಯುವವರೇ ಹೆಚ್ಚು. ಇನ್ನು ಕೆಲವರು ಇದನ್ನೇ ಪ್ರಚಾರ ಎಂದು ಭಾವಿಸಿ ಆನಂದ ಅನುಭವಿಸುತ್ತಾರೆ. ಆದರೆ ತನಗೆ ಯಾವುದು ಬೇಡ ಸಮಾಜ ಸೇವೆ ಸಾಕೇನ್ನುವ ಇಮ್ರಾನ್ ಮಾರಿಪಳ್ಳ ಮಗುವನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯುವ ಮೂಲಕ ನೇರವಾಗಿದ್ದರೆ.



