Home Karavali Karnataka ಪವಿತ್ರ ಜನಿವಾರ ಪ್ರಕರಣ : ಉಡುಪಿ ಜಿಲ್ಲಾ ಸಮಸ್ತ ಬ್ರಾಹ್ಮಣ ಸಂಘಟನೆಯಿಂದ ಸರಕಾರಕ್ಕೆ ಖಡಕ್ ಎಚ್ಚರಿಕೆ….!!

ಪವಿತ್ರ ಜನಿವಾರ ಪ್ರಕರಣ : ಉಡುಪಿ ಜಿಲ್ಲಾ ಸಮಸ್ತ ಬ್ರಾಹ್ಮಣ ಸಂಘಟನೆಯಿಂದ ಸರಕಾರಕ್ಕೆ ಖಡಕ್ ಎಚ್ಚರಿಕೆ….!!

ಉಡುಪಿ: ಪವಿತ್ರ ಜನಿವಾರ ಪ್ರಕರಣ: ಉಡುಪಿ ಜಿಲ್ಲಾ ಸಮಸ್ತ ಬ್ರಾಹ್ಮಣ ಸಂಘಟನೆಯಿಂದ ಸರಕಾರಕ್ಕೆ ಖಡಕ್ ಎಚ್ಚರಿಕೆ


ರಾಜ್ಯಾದ್ಯಂತ ಸಿ.ಇ.ಟಿ. ಪರೀಕ್ಷಾ ಕೇಂದ್ರದಲ್ಲಿ ಕೆಲವು ಕಡೆ ಜನಿವಾರಕ್ಕೆ ನಿಷೇಧ

ಪ್ರಕರಣ 1: ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಸಿ.ಇ.ಟಿ. ಪರೀಕ್ಷಾ ಕೇಂದ್ರದಲ್ಲಿ ಮುಗ್ಧ ಬ್ರಾಹ್ಮಣ ಬಾಲಕನ ಯಜ್ಯೋಪವೀತವನ್ನು ತೆಗೆಸಿ, ಛಿದ್ರಗೊಳಿಸಿ, ಧಾರ್ಮಿಕ ವಿರುದ್ಧವಾದ ಅಮಾನವೀಯ ಹೇಯ ಕೃತ್ಯ.

  1. ಬೀದರ್‌ನಲ್ಲಿ ಜನಿವಾರ ಧರಿಸಿದ ಸುಚಿವ್ರತ ಕುಲಕರ್ಣಿಗೆ ಜನಿವಾರ ತೆಗೆಯಲು ಹೇಳಿ, ಆತ ನಿರಾಕರಿಸಿದಾಗ ಪರೀಕ್ಷೆಯಿಂದ ವಂಚಿತನಾಗಿ ಮಾನಸಿಕ ಶಿಕ್ಷೆಗೆ ಒಳಗಾದ ವಿದ್ಯಾರ್ಥಿ.
  2. ಧಾರವಾಡ ನಗರದ ಹುರಕಡ್ಡಿ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಯ ಜನಿವಾರವನ್ನು ಕತ್ತರಿಸಿ, ಅವನ ಕೈಗೆ ಕೊಟ್ಟು ಪರೀಕ್ಷಾ ಕೇಂದ್ರಕ್ಕೆ ಒಳಗೆ ಬಿಟ್ಟ ಪರೀಕ್ಷಾ ಸಿಬ್ಬಂಧಿ.
  3. ಸಾಗರದಲ್ಲಿ ಜೂನಿಯರ್ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ಜನಿವಾರ ಧರಿಸಿದ ಎಲ್ಲಾ ವಿದ್ಯಾರ್ಥಿಗಳ ಜನಿವಾರ ತೆಗೆಸಿದ ಸಿಬ್ಬಂದಿ ವರ್ಗ.

ಹೀಗೆ ಇನ್ನೂ ಎಲ್ಲೆಲ್ಲಿ ಇಂತಹ ಘಟನೆ ನಡೆದಿದೆ ಎಂಬುದನ್ನು ಇಷ್ಟರಲ್ಲೇ ತಿಳಿಯಬೇಕಾಗಿದೆ. ಬ್ರಾಹ್ಮಣರು ಮತ್ತು ಇನ್ನಿತರ ಜನಿವಾರಧಾರಿಗಳ ತ್ರಿಕರಣ ಶುದ್ಧಗೈಯುವ ಪವಿತ್ರವಾದ ಬ್ರಹ್ಮಸೂತ್ರ. ವಟುಗಳಲ್ಲಿ ಸ್ವಾತ್ವಿಕ, ಧಾರ್ಮಿಕ, ಶೈಕ್ಷಣಿಕ ಮನೋಭಾವವನ್ನು ಹುಟ್ಟು ಹಾಕುವ ಮಂಗಳ ದಾರ. ಈವರೆಗೆ ಆಗದೇ ಇದ್ದ ಈ ಹೀನಕೃತ್ಯ ಇದೀಗ ಆಗಲು ಕಾರಣವೇನು? ಇದರ ಹಿಂದೆ ಯಾವ ದುರುದ್ದೇಶವಿದೆ ಎನ್ನುವುದನ್ನು ತಿಳಿಯಬೇಕಾಗಿದೆ.

ಇತ್ತೀಚೆಗೆ ಇಂತಹ ತಾಮಸಿಕ ಮನೋಸ್ಥಿತಿ ನಿರ್ಮಾಣವಾಗುತ್ತಿರುವುದು ದೇಶದ ಅಖಂಡತೆಗೆ ಕೆಡಕಾಗಬಹುದು. ಇತ್ತೀಚಿನ ದಿನಗಳಲ್ಲಿ ಬ್ರಾಹ್ಮಣ ಸಮಾಜದ ನೈತಿಕತೆಯ ಮೇಲೆ ಕ್ರೌರ್ಯ, ದಬ್ಬಾಳಿಕೆ ಮಿತಿ ಮೀರಿದ ವಾತಾವರಣ ನಿರ್ಮಾಣವಾಗುತ್ತಿದೆ. ಸರಕಾರವು ಇನ್ನಾದರೂ ಎಚ್ಚೆತ್ತು ಇಂತಹ ದುರ್ಘಟನೆಗಳು ಪನರ್ಘಟಿಸದಂತೆ ನೋಡಿಕೊಳ್ಳಬೇಕು. ಪರೀಕ್ಷೆಗೂ ಜನಿವಾರಕ್ಕೂ ಏನು ಸಂಬಂಧ? ಜನಿವಾರದಿಂದ ಕಾಪಿ ಮಾಡಲು ಸಾಧ್ಯವೇ? ಜನಿವಾರ ಧರಿಸುವುದು ವಿಪ್ರರು ಮಾತ್ರವಲ್ಲ ಹಿಂದೂ ಧರ್ಮದಲ್ಲಿ ಇತರ ಜಾತಿವರ್ಗದವರೂ ಕೂಡ ಧರಿಸುತ್ತಾರೆ.

  1. ಪರೀಕ್ಷೆ ನಡೆಸುವಾಗ ಇಂತಹುದೇ ನೀತಿ ಸಂಹಿತೆ ಎನ್ನುವುದು ಸರಕಾರಕ್ಕೆ ಇದೆಯಲ್ಲವೇ? ಆದರೆ ಇಂತಹ ಧಾರ್ಮಿಕ ಕಟ್ಟುಪಾಡುಗಳ ವಿರುದ್ಧ ಕೆಲಸ ಮಾಡಲು ಕಾಣದ ಕೈ ಕೆಲಸ ಮಾಡುತ್ತಿದೆಯಾದರೆ ಸರಕಾರವು ಇದರ ಹಿಂದೆ ಇದೆ ಎಂದು ಭಾವಿಸಬೇಕಾಗುತ್ತದೆ. ಈ ಹೀನ ಕೃತ್ಯಕ್ಕೆ ಪ್ರಚೋದನೆ ನೀಡಿದ ಮತ್ತು ನೀಡುವ ವ್ಯಕ್ತಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಹೀಗಾಗಿ ಎಲ್ಲಾ ಸನಾತನ ಹಿಂದೂ ಧರ್ಮದವರು ಒಟ್ಟು ಸೇರಿ ಪ್ರತಿಭಟಿಸಬೇಕಾಗಿದೆ. ಈ ಬಗ್ಗೆ ಕರ್ನಾಟಕ ಘನ ಸರ್ಕಾರದ ಮಾನ್ಯ ಮಂತ್ರಿಯವರು ಚಕಾರವೆತ್ತದೇ ಇರುವುದು ಎಷ್ಟು ಸಮಂಜಸ? ಮತ್ತು ಬ್ರಾಹ್ಮಣ ವರ್ಗದವರ ಅವಗಣನೆ ಮತ್ತು ದಬ್ಬಾಳಿಕೆ ಮಾಡುತ್ತಿದ್ದಾರೆಂದೇ ತಿಳಿಯಬೇಕಾಗಿದೆ.

ಹೀಗೆ ಮುಂದುವರಿದಲ್ಲಿ ಶಾಂತ ಚಿತ್ತರಾದ ನಾವು ಉಗ್ರಚಿತ್ರರಾಗಿ, ಉಗ್ರ ಹೋರಾಟಕ್ಕೂ ಸಿದ್ಧರಾಗಬೇಕಾಗುತ್ತದೆ. ಒಂದು ಕಣ್ಣಿಗೆ ಬೆಣ್ಣೆ, ಇನ್ನೊಂದು ಕಣ್ಣಿಗೆ ಸುಣ್ಣ ಬಳಿಯುವ ನೀತಿಯನ್ನು ನಾವು ಖಂಡಿಸುತ್ತೇವೆ. ಪರೀಕ್ಷಾ ವಂಚಿತ ಎಲ್ಲಾ ವಿದ್ಯಾರ್ಥಿಗಳಿಗೆ ಪುನಃ ಪರೀಕ್ಷೆಗೆ ಅವಕಾಶ ಮಾಡಿಕೊಟ್ಟು ಅವರ ಭವಿಷ್ಯತ್ತಿಗೆ ಸರಕಾರ ನೆರವಾಗಬೇಕು ಹಾಗೆಯೇ ದಬ್ಬಾಳಿಕೆಯನ್ನು ತೋರಿಸಿದ ಅಧಿಕಾರಿವರ್ಗಕ್ಕೆ ಉಗ್ರ ಶಿಕ್ಷೆಯಾಗಬೇಕು. ಇದು ಎರಡನ್ನೂ ಮಾಡದಿದ್ದಲ್ಲಿ ಸಮಸ್ತ ವಿಪ್ರ ಸಮಾಜ ಸನಾತನ ಹಿಂದೂ ಧರ್ಮದವರೊಂದಿಗೆ ಸೇರಿ, ಉಗ್ರ ಹೋರಾಟಕ್ಕೆ ಕರೆಕೊಡಬೇಕಾಗುತ್ತದೆ.

ಕೊನೆಯಲ್ಲಿ ಸರಕಾರ ಎಲ್ಲಾ ಜಾತಿವರ್ಗದವರನ್ನು ಸಮಾನವಾಗಿ ಕಂಡು, ಭಾರತೀಯ ಸಂಸ್ಕೃತಿಯನ್ನು ಪಾಲಿಸಬೇಕಾಗಿದೆ.
ಪತ್ರಿಕಾ ಗೋಷ್ಠಿಯಲ್ಲಿ ಶ್ರೀಕಾಂತ ಉಪಾಧ್ಯಾಯ, ಅಧ್ಯಕ್ಷರು, ಉಡುಪಿ ತಾಲೂಕು ಬ್ರಾಹ್ಮಣ ಮಹಾಸಭಾ, ಸಂದೀಪ್ ಕುಮಾರ್ ಮಂಜ, ಅಧ್ಯಕ್ಷರು ಉಡುಪಿ ಜಿಲ್ಲಾ ಬ್ರಾಹ್ಮಣ ಮಹಾಸಭಾ,​ ಚಂದ್ರಕಾಂತ್ ಭಟ್, ಅಧ್ಯಕ್ಷರು, ಜಿಲ್ಲಾ ಯುವ ಬ್ರಾಹ್ಮಣ ಪರಿಷತ್‌, ಉಡುಪಿ ಜಿಲ್ಲೆ.​ ಜಯರಾಮ ಆಚಾರ್ಯ, ತುಳು ಶಿವಳ್ಳಿ ಮಾಧ್ವ ಮಹಾಮಂಡಳಿ, ಉಡುಪಿ​, ಗಣೇಶ್ ಹೆಬ್ಬಾರ್, ಅಧ್ಯಕ್ಷರು, ಉಡುಪಿ ಜಿಲ್ಲಾ ಸ್ಥಾನಿಕ ಬ್ರಾಹ್ಮಣ ಸಮಾಜ.​, ​ಎ. ಗಣೇಶ್, ಅಧ್ಯಕ್ಷರು, ಕೂಟ ಮಹಾಜಗತ್ತು ಉಡುಪಿ ಜಿಲ್ಲೆ.,​ ಪಾಂಡುರಂಗ ಲಾಗ್ಟನ್‌ಕರ್, ಅಧ್ಯಕ್ಷರು, ಕರಾಡ ಬ್ರಾಹ್ಮಣ ಸಮಾಜ, ಉಡುಪಿ ಜಿಲ್ಲೆ,​ ಮಂಜುನಾಥ ಹೆಬ್ಬಾರ್., ಅಧ್ಯಕ್ಷರು, ಉಡುಪಿ ಜಿಲ್ಲಾ ಸ್ಥಾನಿಕ ಬ್ರಾಹ್ಮಣ ಸಮಾಜಗಳ ಒಕ್ಕೂಟ,​ಜಯರಾಮ ಆಚಾರ್ಯ, ಮನೋಹರ ರಾವ್, ಕೃಷ್ಣರಾಜ್ ಬಲ್ಲಾಳ್, ಶ್ರೀವತ್ಸ ಆಚಾರ್ಯ, ರಾಜಗೋಪಾಲ್ ಆಚಾರ್ಯ, ಹಯವದನ ಭಾಟ್, ಜನಾರ್ದನ್ ಭಟ್ ಮೊದಲಾದವರು ಉಪಸ್ಥಿತರಿದ್ದರು