ಉಡುಪಿ : ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಸ್ಥಾಪಕರಾದ ಉಡುಪಿ ವಿಶ್ವನಾಥ್ ಶೆಣೈ ಅವರು ‘ಹಿರಿಯರಿಗೆ ನೆರವು” ಯೋಜನೆಯ ಅಡಿಯಲ್ಲಿ ಉಡುಪಿಯ ದೊಡ್ಡಣಗುಡ್ಡೆ ನಿವಾಸಿ ಪುಂಡರಿಕಾಕ್ಷ ಅವರಿಗೆ ಅಗತ್ಯವಿರುವ ವೀಲ್ ಚೇರನ್ನು ಉಚಿತವಾಗಿ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಅಧ್ಯಕ್ಷರಾದ ಪ್ರೊ. ಶಂಕರ್, ಸಂಚಾಲಕ ರವಿರಾಜ್ ಎಚ್.ಪಿ. ಹಾಗೂ ಗೌರವ ಸಲಹೆಗಾರರಾದ ಜನಾರ್ದನ ಕೊಡವೂರು ಉಪಸ್ಥಿತರಿದ್ದರು.