Home Crime ಅಕ್ರಮ ಮರಳು ಸಾಗಾಟ : ಗೂಡ್ಸ್ ವಾಹನ ವಶಕ್ಕೆ…!!

ಅಕ್ರಮ ಮರಳು ಸಾಗಾಟ : ಗೂಡ್ಸ್ ವಾಹನ ವಶಕ್ಕೆ…!!

ಮಲ್ಪೆ: ಉಡುಪಿ ಜಿಲ್ಲೆಯ ಮಲ್ಪೆ ಠಾಣಾ ವ್ಯಾಪ್ತಿಯಲ್ಲಿ ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಾಟದ ಸಮಯದಲ್ಲಿ ಪೊಲೀಸರು ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಅಕ್ರಮ ಮರಳು ಸಾಗಾಟಕ್ಕೆ ಬಳಸಿದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಕರಣ ವಿವರ: ಪಿರ್ಯಾದಿದಾರರಾಧ ಅನಿಲ್‌ ಕುಮಾರ್‌ ಡಿ ಪಿಎಸ್‌ಐ ಮಲ್ಪೆ ಪೊಲೀಸ್‌ ಠಾಣೆ ಇವರು ದಿನಾಂಕ 22/07/2025 ರಂದು ಬೆಳಿಗ್ಗೆ ಸಿಬ್ಬಂದಿಯವರೊಂದಿಗೆ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ 11:40 ಗಂಟೆಗೆ ಉಡುಪಿ ತಾಲೂಕು ಕೊಡವೂರು ಗ್ರಾಮದ ಮಲ್ಪೆ ತೊಟ್ಟಂ ರಸ್ತೆಯಲ್ಲಿರುವ ಸ್ಕಂದ ಲಾಡ್ಜ್‌ ಬಳಿ ವಾಹನ ತಪಾಸಣೆ ಮಾಡುತ್ತಿರುವಾಗ, ಮಹೀಂದ್ರಾ ಜಿತೋ S6-16 ಗೂಡ್ಸ್‌ ವಾಹನ ನಂಬ್ರ KA20D7807 ನೇದನ್ನು ಆಪಾದಿತ ಸುಹೇಬ್‌ ಎಂಬಾತನು ಹೂಡೆ ಕಡೆಯಿಂದ ಮಲ್ಪೆ ಕಡೆಗೆ ಅನುಮಾನಾಸ್ಪದವಾಗಿ ಚಲಾಯಿಸಿಕೊಂಡು ಬಂದ ಮೇರೆಗೆ ಪಿರ್ಯಾದುದಾರರು ಪರಿಶೀಲಿಸಿದ್ದು, ಸದರಿ ವಾಹನದಲ್ಲಿ ಸುಮಾರು ಅರ್ಧ ಯುನಿಟ್‌ ನಷ್ಟು ಮರಳು ತುಂಬಿರುವುದು ಕಂಡು ಬಂದಿದ್ದು, ಈ ಬಗ್ಗೆ ಆರೋಪಿತನಲ್ಲಿ ವಿಚಾರಿಸಲಾಗಿ, ಮರಳು ಸಾಗಾಟದ ಬಗ್ಗೆ ಯಾವುದೇ ದಾಖಲಾತಿ ಇರುವುದಿಲ್ಲವಾಗಿ ತಿಳಿಸಿರುತ್ತಾನೆ. ಆರೋಪಿತನು ಒಬ್ಬಂಟಿಯಾಗಿಯೋ ಅಥವಾ ಸಂಘಟಿತವಾಗಿಯೋ ಯಾವುದೋ ಸ್ಥಳದಿಂದ ಕಳವು ಮಾಡಿಕೊಂಡು ಬಂದು, ಯಾವುದೋ ಸ್ಥಳಕ್ಕೆ ಯಾವುದೇ ಪರವಾನಿಗೆ ಇಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದವರನ್ನು ಪತ್ತೆ ಮಾಡಿ, ಮಹಜರು ಮುಖೇನ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಸುಮಾರು ½ ಯುನಿಟ್‌ ನಷ್ಟು ಮರಳಿನ ಮೌಲ್ಯ ರೂ. 2,000 ಮತ್ತು ಮಹೀಂದ್ರಾ ಜಿತೋ ವಾಹನದ ಮೌಲ್ಯ ರೂ. 50,000 ಆಗಬಹುದುದಾಗಿದೆ.

ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 86/2025 ಕಲಂ:303(2),112 BNS 2023 & 4, 4(A), 21 MMDR Act ರಂತೆ ಪ್ರಕರಣ ದಾಖಲಾಗಿರುತ್ತದೆ.