Home Crime ಮುಂಬೈ : ಆಸ್ಪತ್ರೆಯ ಮಹಿಳಾ ರಿಸೆಪ್ಯನಿಸ್ಟ್ ಮೇಲೆ ಹಲ್ಲೆ….!!

ಮುಂಬೈ : ಆಸ್ಪತ್ರೆಯ ಮಹಿಳಾ ರಿಸೆಪ್ಯನಿಸ್ಟ್ ಮೇಲೆ ಹಲ್ಲೆ….!!

ಥಾಣೆ: ಮುಂಬಯಿನ ಕಲ್ಯಾಣ್‌ನ ಖಾಸಗಿ ಆಸ್ಪತ್ರೆಯ 25 ವರ್ಷದ ಮಹಿಳಾ ರಿಸೆಪ್ಶನಿಸ್ಟ್, ಅಪಾಯಿಂಟ್‌ಮೆಂಟ್ ಇಲ್ಲದೆ ವೈದ್ಯರ ಕೊಠಡಿಗೆ ಕಳುಹಿಸಲು ನಿರಾಕರಿಸಿದ್ದಕ್ಕೆ ವ್ಯಕ್ತಿಯೊಬ್ಬ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರಿಂದ ತಿಳಿದು ಬಂದಿದೆ.

“ಸಂತ್ರಸ್ತ ಯುವತಿಯ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸಕ್ಷೆನ್ ಗಳಡಿಯಲ್ಲಿ ಹಲ್ಲೆ, ಅಶ್ಲೀಲ ಭಾಷೆ ಬಳಕೆ ಮತ್ತು ಮಹಿಳೆಯ ಮಾನಹಾನಿಗಾಗಿ ನಾವು ಎಫ್‌ಐಆರ್ ದಾಖಲಿಸಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಅವರು ಹೇಳಿದ್ದಾರೆ.

ಸೋಮವಾರ ಸಂಜೆ ಮಕ್ಕಳ ಆಸ್ಪತ್ರೆಯಲ್ಲಿ ಗೋಕುಲ್ ಝಾ ಎಂದು ಗುರುತಿಸಲಾದ ಆರೋಪಿ, ರಿಸೆಪ್ಶನಿಸ್ಟ್ ಗೆ ಕಾಲಿನಿಂದ ಒದ್ದು ಕೂದಲು ಹಿಡಿದು ಎಳೆದಾಡುತ್ತಿರುವ ವಿಡಿಯೋ ವೈರಲ್ ಆಗಿದೆ.

ಇತರ ರೋಗಿಗಳ ಸಂಬಂಧಿಕರು ರಿಸೆಪ್ಶನಿಸ್ಟ್ ಅನ್ನು ರಕ್ಷಿಸಿದ್ದಾರೆ.

ರಿಸೆಪ್ಶನಿಸ್ಟ್, ತನಗೆ ಮತ್ತು ಮಗುವಿನೊಂದಿಗೆ ಬಂದ ಮಹಿಳೆಗೆ ಸರದಿ ಸಾಲನ್ನು ದಾಟಿ ವೈದ್ಯರನ್ನು ಭೇಟಿ ಮಾಡಲು ಅವಕಾಶ ನೀಡದ ಕಾರಣ ಆಕ್ರೋಶಗೊಂಡ ಆರೋಪಿ ಹಲ್ಲೆ ನಡೆಸಿದ್ದಾನೆ ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.ಪೊಲೀಸರ ವಿಚಾರಣೆ ನಡೆಸುತ್ತಿದ್ದಾರೆ.