ಕೋಟ: ಉಡುಪಿ ಜಿಲ್ಲೆಯ ಕುಂದಾಪುರದ ಕೋಟ ಸಮೀಪ ವೃದ್ಧೆಯೊಬ್ಬರ ಮನೆಯಲ್ಲಿ ಕೆಲಸಕ್ಕೆ ಇದ್ದ ಹೋಂ ನರ್ಸ್ ಕೆಲಸಕ್ಕಿದ್ದ ಯುವತಿಯೊಬ್ಬಳು ಚಿನ್ನಾಭರಣಗಳನ್ನು ಕಳ್ಳತನ ನಡೆಸಿದ ಘಟನೆ ನಡೆದಿದೆ.
ಕಳ್ಳತನ ನಡೆಸಿದ ಯುವತಿ ಸಾಗಾರ ನಿವಾಸಿ ಶೀಲ ಎಂದು ಗುರುತಿಸಲಾಗಿದೆ.
ಬ್ರಹ್ಮಾವರದ ಪಾಡೇಶ್ವರ ನಿವಾಸಿ ಸಿಪ್ರಿಯನ್ ಡಿ ಅಲ್ಮೆಡಾ ಎಂಬವರು ಕಳ್ಳತನ ಸಂಭವಿಸಿದೆ ಎಂದು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣ ವಿವರ : ಪಿರ್ಯಾದಿ ಸಿಪ್ರಿಯನ್ ಡಿ ಅಲ್ಮೆಡಾ (62) ಪಾಂಡೇಶ್ವರ ಗ್ರಾಮ ಬ್ರಹ್ಮಾವರ ತಾಲೂಕು ಇವರು ದುಬೈನಲ್ಲಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿರುತ್ತಾರೆ. ಅವರ ತಾಯಿ ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದರಿಂದ ಊರಿಗೆ ಮರಳಿರುತ್ತಾರೆ. ಅವರನ್ನು ನೋಡಿಕೊಳ್ಳಲು ಎಜೆನ್ಸಿಯವರು ಹೋಂ ನರ್ಸ್ ಆಗಿ ಸಾಗರ ತಾಲೂಕಿನ ಚಾಮಗಾರ ಕೇರಿ ನಿವಾಸಿ ಶೀಲ ಎಂಬುವವರನ್ನು ಕಳುಹಿಸಿಕೊಟ್ಟಿರುತ್ತಾರೆ. ಶೀಲಳು ತನ್ನ ಗಂಡ ಮಣಿ @ ಲೋಹಿತ್ , ಮೈದುನ ಸಂತೋಷ್ ಮತ್ತು ಅತ್ತೆ (ಮಣಿಯ ತಾಯಿ) ಎಂದು ಪರಿಚಯಿಸಿ ಕೊಟ್ಟಿರುತ್ತಾಳೆ. ಶೀಲಳು ಸುಮಾರು ದಿನಗಳ ಕಾಲ ಪಿರ್ಯಾದಿದಾರರ ಮನೆಯಲ್ಲಿ ಕೆಲಸ ಮಾಡಿ ದಿನಾಂಕ:27/05/2025 ರಂದು ಆಕೆಯ ಮಗನಿಗೆ ಆರೋಗ್ಯ ಸರಿಯಿಲ್ಲದ ಕಾರಣ ಊರಿಗೆ ಹೋಗುತ್ತೇನೆ ಎಂದು ತಿಳಿಸಿ ಊರಿಗೆ ಹೋಗಿರುತ್ತಾಳೆ. ದಿನಾಂಕ:28/05/2025 ರಂದು ಪಿರ್ಯಾದಿದಾರರು ತಾಯಿಯ ಚಾಕರಿ ಮಾಡಿ ಕೋಣೆಗೆ ಹೋಗಿ ಕಪಾಟಿನಲ್ಲಿ ಲಾಕರ್ ರೆಗೆದು ನೋಡಿದಾಗ ಡ್ರಾವರ್ ನಲ್ಲಿ ಇದ್ದ ದುಮಾರು 5,00,000/- ಕ್ಕೂ ಹೆಚ್ಚು ಮೌಲ್ಯದ ಚಿನ್ನದ ಒಡವೆಗಳು , 87,000/- ಹಣ, 1,10,000/- ಚೂರಿ ಸೆಟ್ ಹಾಗೂ 78,000/- ಬೆಲೆ ಬಾಳುವ ಪಾತ್ರೆ ಸೆಟ್ ಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ನಂತರ ಇದೇ ವಿಷಯದಲ್ಲಿ ಆರೋಪಿತರನ್ನು ಸಂಪರ್ಕಿಸಿ ಆನಂದಪುರ ಪೊಲೀಸ್ ಠಾಣೆಗೆ ಕರೆಯಿಸಿ ಮಾತು ಕತೆ ನಡೆಸಿ ಕಳುವು ಮಾಡಿಕೊಂಡು ಹೋದ ಬಗ್ಗೆ ತಪ್ಪೊಪ್ಪಿಕೊಂಡಿದ್ದು ಅದರಲ್ಲಿ 1,30,000/- ಹಣದ ಬ್ರಾಸ್ಲೈಟ್ ಹಾಗೂ 40,000/- ಹಣವನ್ನು ವಾಪಾಸು ಪಿರ್ಯಾದಿದಾರರಿಗೆ ನೀಡಿದ್ದು ಉಳಿದ ಹಣ ಮತ್ತು ಒಡವೆಯನ್ನು ನಂತರದಲ್ಲಿ ಕೊಡುವುದಾಗಿ ತಿಳಿಸಿದ್ದು ಈವರೆಗೂ ಕೊಡದೇ ಇರುವುದಾಗಿರುತ್ತದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 135/2025 ಕಲಂ: 306 ಜೊತೆಗೆ 3(5) BNS ನಂತೆ ಪ್ರಕರಣ ದಾಖಲಾಗಿರುತ್ತದೆ