Home Crime ಮಣಿಪಾಲದಲ್ಲಿ ವಾಹನಗಳ ತಪಾಸಣೆ : 18 ಕಾರ್, 3 ಬೈಕ್ ಸೇರಿದಂತೆ 21 ವಾಹನ ಮುಟ್ಟುಗೊಲು…!!

ಮಣಿಪಾಲದಲ್ಲಿ ವಾಹನಗಳ ತಪಾಸಣೆ : 18 ಕಾರ್, 3 ಬೈಕ್ ಸೇರಿದಂತೆ 21 ವಾಹನ ಮುಟ್ಟುಗೊಲು…!!

ಲಕ್ಷಾಂತರ ರೂ.ದಂಡ ವಸೂಲಿ….

ಮಣಿಪಾಲ: ಮಣಿಪಾಲದ ಠಾಣಾ ವ್ಯಾಪ್ತಿಯ 5 ಕಡೆಗಳಲ್ಲಿ ಪೊಲೀಸರು ದಿಢೀರ್ ಕಾರ್ಯಾಚರಿಸಿ ವಾಹನಗಳ ವಿಶೇಷ ತಪಾಸಣೆ ನಡೆಸಿ, 18 ಕಾರುಗಳು ಮತ್ತು 3 ಬೈಕ್ ಗಳು ಸೇರಿದಂತೆ 21 ವಾಹನಗಳನ್ನು ವಶಪಡಿಸಿಕೊಂಡ ಮದ್ಯಪಾನ ಮಾಡಿ ವಾಹನ ಚಾಲನೆ ಪತ್ತೆ ಹಚ್ಚಿ ಲಕ್ಷಾಂತರ ರೂ. ದಂಡ ವಸೂಲಿ ಮಾಡಿರುತ್ತಾರೆ.

ಮದ್ಯ ಸೇವಿಸಿ ವಾಹನ ಚಲಾವಣೆ ಮಾಡುವ ಪ್ರತಿಯೊಂದು ಪ್ರಕರಣಕ್ಕೆ ನ್ಯಾಯಲಯದಲ್ಲಿ ಕನಿಷ್ಠ ರೂ.10,000ದಂಡ ವಿಧಿಸಲಾಗುತ್ತದೆ. ಇದಲ್ಲದೆ ಅಜಾಗರೂಕತೆಯಿಂದ ವಾಹನ ಚಲಾಯಿಸಿ ಪೊಲೀಸರ ಸೂಚನೆ ಉಲ್ಲಂಘಿಸಿದ, ಮೂವರು ಸವಾರಿ ಮಾಡಿದ ಪ್ರಕರಣಗಳಲ್ಲಿ 10 ವಾಹನಗಳಿಗೆ ರೂ.10,000ಸ್ಥಳ ದಂಡ ವಿಧಿಸಲಾಗಿದೆ.

ಉಡುಪಿ ಪೊಲೀಸ್ ಅಧಿಕ್ಷಕರ ಸೂಚನೆ ಮೇರೆಗೆ ಉಡುಪಿ ಡಿವೈಎಸ್ಪಿ, ಮಣಿಪಾಲ ಪೊಲೀಸ್ ನಿರೀಕ್ಷಕರ ನೇತೃತ್ವದಲ್ಲಿ ಉಡುಪಿ ನಗರ, ಉಡುಪಿ ಸಂಚಾರ, ಮಲ್ಪೆ ಹಾಗೂ ಮಣಿಪಾಲ ಪೊಲೀಸರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು. ಇನ್ನು ಮುಂದೆಯೂ ಸಹ ಮದ್ಯಪಾನವನ್ನು ಮಾಡಿ ವಾಹನವನ್ನು ಚಲಾಯಿಸುವವರ ಹಾಗೂ ಅತಿ ವೇಗ ಹಾಗೂ ಅಜಾಗರೂಕತೆಯಿಂದ ವಾಹನ ಚಲಾಯಿಸುವವರ ವಿರುದ್ಧ ಕಾರ್ಯಾಚರಣೆ ಮುಂದುವರೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.